
ಕಾವೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ ) ಇದರ ಸಮುದಾಯ ವಿಭಾಗದಿಂದ ಪರಿಯಾಳ ಸಮುದಾಯ ಭವನ, ಕಾವೂರ್ ಇದರ ನೂತನ ಕಟ್ಟಡಕ್ಕಾಗಿ ಅನುದಾನ ವಿತರಣಾ ಕಾರ್ಯಕ್ರಮ ನೆರವೇರಿತು. ಯೋಜನಾಧಿಕಾರಿ ಗಿರೀಶ್ ಅವರು 3 ಲಕ್ಷ ರೂ. ಅನುದಾನವನ್ನು ಪರಿಯಾಳ ಸಂಘಕ್ಕೆ ನೀಡಿದರು.
ಜನ ಜಾಗ್ರತಿ ವೇದಿಕೆ ವಲಯಧ್ಯಕ್ಷ ತುಕಾರಾಮ ಶೆಟ್ಟಿ, ಕಾವೂರ್ ವಲಯದ ಅಧ್ಯಕ್ಷ ರಾಜೇಶ್ ಶೆಟ್ಟಿ ,ಕಾವೂರ್ ವಲಯದ ಮೇಲ್ವಿಚಾರಕ ಅಭಿಮಾನ್ ಜೈನ್, ಜನಜಾಗೃತಿ ಪದಾಧಿಕಾರಿ ನಾರಾಯಣ ಸಾಲ್ಯಾನ್, ಒಕ್ಕೂಟ ಪದಾಧಿಕಾರಿ ಜೈನಬ್, ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ,
ಸುನೀತ,ಪರಿಯಾಳ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಭುಜಂಗ ಸಾಲ್ಯಾನ್,ಸಮುಧಾಯ ಭವನ ನಿರ್ಮಾಣ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್,ಸಂಘದ ಗೌರವಧ್ಯಕ್ಷ ರಮೇಶ್ ಬಂಗೇರ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬಂಗೇರ, ಕೋಶಾಧಿಕಾರಿ ಪ್ರಶಾಂತ್ ಸಾಲ್ಯಾನ್, ಪರಿಯಾಳ ಮಹಾಸಭೆಯ ಕೋಶಾಧಿಕಾರಿ ಗೌತಮ್ ಸುವರ್ಣ, ಸದಸ್ಯರಾದ ದಯಾನಂದ್ ನಿತ್ಯಾನಂದ್, ಪ್ರಭಾಕರ್ ಬಂಗೇರ
ಉಪಸ್ಥಿತರಿದ್ದರು.