
ಮಂಗಳೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಂಗಳೂರು ತಾಲೂಕಿನ ಬೊಂಡಂತಿಲ ಪಾಡು ಭದ್ರಾಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ದಾರ ಮತ್ತು ಅಷ್ಟಬಂಧ ಬ್ರಹ್ಮಕಲಾಶಭಿಷೇಕಕ್ಕೆ ರೂ. 1 ಲಕ್ಷ ಅನುದಾನವನ್ನು ಬಜಪೆ ಯೋಜನಾ ಕಚೇರಿಯ ಯೋಜನಾಧಿಕಾರಿ ಗಿರೀಶ್ ಎಂ ಅವರು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಜೀರ್ಣೋದ್ದಾರ, ಅಷ್ಟಭಂದ ಬ್ರಹ್ಮಕಲಾಶೋತ್ಸವ ಸಮಿತಿಯ ಅಧ್ಯಕ್ಷ ಡಾ. ಭರತ್ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಧ್ಯಕ್ಷ ಸುಪ್ರೀತ್ ರೈ, ಕಿಶೋರ್ ಕುಮಾರ್ ಉಗ್ಗಕೋಡಿ,ಚೇತನ್ ಕುಮಾರ್ ನಬ್ಬೆಲು, ನೀರುಮಾರ್ಗ ವಲಯದ ಸುಜಾತ, ಸೇವಾಪ್ರತಿನಿಧಿಗಳಾದ ಸುರೇಶ್ ಬಿ, ಶೈಲಜಾ, ನೀರುಮಾರ್ಗ ಒಕ್ಕೂಟ ದ ವಲಯಧ್ಯಕ್ಷ ಭಾಸ್ಕರ ಸುವರ್ಣ, ಒಕ್ಕೂಟದ ಅಧ್ಯಕ್ಷೆ ಶಶಿಕಲಾ, ಕೇಶವ, ಅಶೋಕ್, ಸತೀಶ್ ಹಾಗೂ ಸಮಿತಿಯ ಪದಾಧಿಕಾರಿಗಳು, ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.