
ಹೆಬ್ರಿ : ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪ.ಪೂ ಕಾಲೇಜಿನ ವಿದ್ಯಾರ್ಥಿನಿ ಶ್ರೀರಮ್ಯ.ಪೈ ದ್ವಿತೀಯ ಪಿ.ಯು.ಸಿ. ಫಲಿತಾಂಶದಲ್ಲಿ 590 ಅಂಕ ಪಡೆದು ರಾಜ್ಯಕ್ಕೆ 10ನೇ ರ‍್ಯಾಂಕ್ ಗಳಿಸಿರುತ್ತಾಳೆ.
ಇಂಗ್ಲೀಷ್, ಸಂಸ್ಕೃತ 100, ಭೌತಶಾಸ್ತ್ರ-97, ರಸಾಯನಶಾಸ್ತ್ರ-98, ಗಣಿತಶಾಸ್ತ್ರ-100, ಗಣಕ ವಿಜ್ಞಾನ- 100 ಅಂಕಗಳೊಂದಿಗೆ 98.33ಶೇಕಡಾ ಸಾಧನೆ ಮಾಡಿರುತ್ತಾಳೆ.
ಕಳಸದ ಶ್ರೀ ರಾಜ್‌ಕುಮಾರ್ ಪೈ ಮತ್ತು ಶ್ರೀಮತಿ ರಚನಾ ಪೈಯವರ ಸುಪುತ್ರಿಯಾಗಿರುವ ಈಕೆ ತನ್ನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಪ್ರಬೋಧಿನಿ ವಿದ್ಯಾಕೇಂದ್ರ (ಕನ್ನಡ ಮಾಧ್ಯಮ) ದಲ್ಲಿ ಮಾಡಿರುತ್ತಾಳೆ.
ಈ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾ, ಹಾಸ್ಟೆಲ್ ಸ್ಟಡಿ ಅವಧಿ ನನಗೆ ತುಂಬಾ ಸಹಾಯವಾಯಿತು, ಅದಲ್ಲದೇ ನಿತ್ಯ ಒಂದು ಗಂಟೆ ಹೆಚ್ಚಿಗೆ ಓದುತ್ತಿದ್ದೆ. ನಿರಂತರ ಪರಿಶ್ರಮದ ಫಲವಾಗಿ ಈ ಫಲಿತಾಂಶ ಬಂದಿದೆ. ಸದಾ ನೆನಪಿನಲ್ಲಿ ಬರುವ ಹಾಗೆ ಅಭ್ಯಾಸ ಮಾಡುತ್ತಿದ್ದೆ. ತಂದೆ -ತಾಯಿ ತುಂಬಾ ಪ್ರೋತ್ಸಾಹ ನೀಡುತ್ತಿದ್ದರು. ಉಪನ್ಯಾಸಕ ವೃಂದದವರು ಸದಾ ಸ್ಫೂರ್ತಿ ತುಂಬುತ್ತಿದ್ದರು. ಮುಂದೆ ಸಾಫ್ಟ್ ವೇರ್ ಇಂಜಿನಿಯರ್ ಆಗುವ ಕನಸು ನನ್ನದು ಎಂದಳು.