Join The Telegram | Join The WhatsApp |
ಏಕದಿನ ಪಂದ್ಯಾವಳಿಯಲ್ಲಿ ಜಾಗತಿಕ ಕ್ರಿಕೆಟ್ ನಲ್ಲಿ 10 ದ್ವಿಶತಕ ದಾಖಲಾಗಿವೆ. ಇದರಲ್ಲಿ ಭಾರತದ ರೋಹಿತ ಶರ್ಮ 3, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಇಶಾನ್ ಕಿಶನ್, ಶುಭಮನ್ ಗಿಲ್ ತಲಾ ಒಂದೊಂದು ಸಲ ದ್ವಿಶತಕದ ಸಾಧನೆ ಮಾಡಿದ್ದಾರೆ.
ಹೈದರಾಬಾದ್ :
ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಶುಭಮನ್ ಗಿಲ್ ಭರ್ಜರಿ ದ್ವಿಶತಕ ಬಾರಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಇಂದು ನಡೆದ ಏಕದಿನ ಪಂದ್ಯಾವಳಿಯಲ್ಲಿ ಅವರು ಎಂಟು ಭರ್ಜರಿ ಸಿಕ್ಸರ್ ಹಾಗೂ 19 ಬೌಂಡರಿ ನೆರವಿನಿಂದ ತಮ್ಮ ದ್ವಿಶತಕ ಪೂರೈಸಿದ್ದಾರೆ. ಭಾರತ ಇತ್ತೀಚಿನ ವರದಿಗಳ ಪ್ರಕಾರ 8 ವಿಕೆಟ್ ಕಳೆದುಕೊಂಡು 349 ರನ್ನು ಗಳಿಸಿದೆ. ಭಾರತ ಕ್ರಿಕೆಟ್ ತಂಡದ ಆಟಗಾರರಾದ ರೋಹಿತ್ ಶರ್ಮ, ಸಚಿನ್ ತೆಂಡೂಲ್ಕರ್, ಇಶಾನ್ ಕಿಶಾನ್ ಅವರು ಏಕದಿನ ಪಂದ್ಯದಲ್ಲಿ ದ್ವಿಶತಕದ ಸಾಧನೆ ಮಾಡಿದ್ದಾರೆ.ಗಿಲ್ ಅವರು 208 ರನ್ ಗಳಿಸಿ ಔಟ್ ಆಗಿದ್ದಾರೆ.
Join The Telegram | Join The WhatsApp |