ಬೆಂಗಳೂರು : ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಈಗ ಬಿಜೆಪಿ ವಕ್ತಾರ ಆಗಿಬಿಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ಅವರು ಇಂದು 2024-25 ನೇ ಸಾಲಿನ ಆಯವ್ಯಯವನ್ನು ಮಂಡಿಸಿದ ನಂತರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ಬಸವಣ್ಣನವರು ಸಮಾನತೆಯನ್ನು ಕಂಡಿದ್ದವರು. ಸಮಸಮಾಜಕ್ಕಾಗಿ ಚಳವಳಿ ಮಾಡಿದವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದೇವೆ. ಕೇಂದ್ರ ಸರ್ಕಾರದ ಬಿಜೆಪಿಯ ಅವಧಿಯದ್ದು ಶೇ 5.8% ಸರ್ಕಾರ. ನಮ್ಮದು ಶೇ 2.95 % ವಿತ್ತೀಯ ಕೊರತೆ (ಫಿಸ್ಕಲ್ ಡೆಫಿಸಿಟ್) ಇದೆ. ಒಟ್ಟಾರೆ ಜನಪರ ಬಜೆಟ್. ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಸಮಾನವಾಗಿ ಬೆಳೆಸುವ ಕೆಲಸ ಮಾಡಲಾಗಿದೆ ಎಂದರು.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ 1,20000 ಕೋಟಿ ಅಭಿವೃದ್ಧಿಗೆ ಖರ್ಚು ಮಾಡಿದರೆ ಅದು ಅಭಿವೃದ್ಧಿಪೂರಕ ಬಜೆಟ್. 52009 ಕೋಟಿ ಬಡವರಿಗೆ ಖರ್ಚು ಮಾಡಿದೆ ಅದು ಅಭಿವೃದ್ಧಿಗೆ ಪೂರಕವಾಗಿರುವಂಥದ್ದು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಕಾಲದಲ್ಲಿ 77, 750 ಕೋಟಿ ರೂ.ಗಳ ಒಟ್ಟು ಸಾಲ , 23 ಸಾವಿರ ಕೋಟಿ ರೂ.ಗಳ ಋಣೇತರ ಸ್ವೀಕೃತಿಗಳಾಗಿದೆ. ಕೇಂದ್ರ ಸರ್ಕಾರ 16.85 ಲಕ್ಷ ಕೋಟಿ ಈ ವರ್ಷಕ್ಕೆ ಸಾಲ ಮಾಡಿದೆ ಎಂದು ವಿವರಿಸಿದರು.

*ಬಿಜೆಪಿಗೆ ಕಾಮಾಲೆ ರೋಗ*
ಮಾಧ್ಯಮದವರ ಮತ್ತೊಂದು ಪ್ರಶ್ನಗೆ ಪ್ರತಿಕ್ರಿಯೆ ನೀಡಿ 3,71,383 ಕೋಟಿ ಗಾತ್ರದ ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ 3 ಸಾವಿರ ಕೋಟಿ (1%ಕ್ಕಿಂತ ಕಡಿಮೆ) ಕೊಡಲಾಗಿದೆÀ. ಎಸ್ ಸಿ ಪಿ /ಟಿಎಸ್‍ಪಿ ಯಲ್ಲಿ 2017-18 ರಲ್ಲಿ 30 ಸಾವಿರ ಕೋಟಿ ನೀಡಲಾಗಿತ್ತು. ಕಳೆದ ಜುಲೈ ಬಜೆಟ್ ನಲ್ಲಿ 34 ಸಾವಿರ ಕೋಟಿ ಕೊಡಲಾಗಿತ್ತು. ಈಗ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ 39 ಸಾವಿರ ಕೋಟಿಗೂ ಹೆಚ್ಚು ಅನುದಾನ ನೀಡಲಾಗಿದೆ. ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಬಾಯಿಯಲ್ಲಿ ಮಾತ್ರ ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್ ಎನ್ನುತ್ತಾರೆ. ಬಿಜೆಪಿಗೆ ಕಾಮಾಲೆ ರೋಗ ಎಂದರು.

ಬೆಂಗಳೂರಿಗೆ ಹೆಚ್ಚು ಅನುದಾನ ನೀಡಿಲ್ಲ, ಹೆಚ್ಚು ಕಾರ್ಯಕ್ರಮಗಳನ್ನು ನೀಡಲಾಗಿದೆ. ಬಿಜೆಪಿ ಬೆಂಗಳೂರನ್ನು ನಿರ್ಲಕ್ಷ್ಯ ಮಾಡಿತ್ತು ಹೆಚ್ಚು ಯೋಜನೆ ಕೊಡಲಾಗಿದೆ. ನಾವು ಬ್ರ್ಯಾಂಡ್ ಬೆಂಗಳೂರು 1.50 ಕೋಟಿ ಜನರಿದ್ದು, ಅವರಿಗೆ ಮೂಲಭೂತ ಸೌಕರ್ಯಕ್ಕೆ ಅನುದಾನ ನೀಡಲಾಗಿದೆ.
ಹೈದರಾಬಾದ್ ಕರ್ನಾಟಕ್ಕೆ 1500 ಕೋಟಿ ರೂ.ಗಳು ಈವರೆಗ ವೆಚ್ಚವಾಗಿದ್ದು, ಈ ಬಾರಿ ಕ್ರಿಯಾ ಯೋಜನೆಯನ್ನು ಏಪ್ರಿಲ್ ನಲ್ಲಿಯೇ ತಯಾರಿಸಿ ಹೆಚ್ಚು ವೆಚ್ಚ ಮಾಡಲಾಗುವುದು ಎಂದರು.
ಎಸ್ ಸಿಪಿ ಟಿಎಸ್ ಪಿ ಯಿಂದ ಗ್ಯಾರಂಟಿಗೆ ಅನುದಾನ ತೆಗೆದುಕೊಳ್ಳಲಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿ ಅಲ್ಲಿಂದ ಕೆಲವೊಮ್ಮೆ ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲಿಯೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರು ಬರುತ್ತಾರೆ. ಅವರ ಜನಸಂಖ್ಯೆಯಲ್ಲಿ ಆಧಾರದ ಮೇಲೆ ಪಡೆಯಲಾಗುವುದು ಎಂದರು.

ಜೆ.ಹೆಚ್ ಪಟೇಲ್ ಸರ್ಕಾರದಲ್ಲಿ ಮಾಡಿದಂತೆ ಬಾಂಡ್ ಮೂಲಕ ಸಾಲ ತೆಗೆದುಕೊಳ್ಳುವ ಕೆಲಸ ಈಗ ಮಾಡುತ್ತಿಲ್ಲ. ಆಗ ಪಡೆದಿದ್ದ ಬಾಂಡ್‍ಗಳನ್ನು ಬಡ್ಡಿ ಸಮೇತ ಹಿಂದಿರುಗಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.