ಮುಂಬೈ: ಉದ್ಯಮಿ, ಮದ್ಯದ ದೊರೆ ಎಂದೇ ಹೆಸರಾದ ವಿಜಯ್ ಮಲ್ಯ ಪುತ್ರ ಸಿದ್ದಾರ್ಥ ಮಲ್ಯ ತಮ್ಮ ಬಹುಕಾಲದ ಗೆಳತಿ ಜಾಸ್ಮಿನ್ ಅವರನ್ನು ವಿವಾಹವಾಗುತ್ತಿದ್ದಾರೆ.ಜೋಡಿ 2023ರ ನವೆಂಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿತ್ತು.ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಜಾಸ್ಮಿನ್ ಅವರೊಂದಿಗೆ ಪೋಸ್ಟ್ ಹಂಚಿಕೊಂಡಿರುವ ಅವರು, ವಿವಾಹದ ವಾರ ಆರಂಭವಾಗಿದೆ ಎಂದು ಬರೆದುಕೊಂಡಿದ್ದಾರೆ.ಮಾಡೆಲ್ ಹಾಗೂ ನಟರಾಗಿರುವ ಸಿದ್ದಾರ್ಥ್ ಮಲ್ಯ ಕ್ಯಾಲಿಪೋರ್ನಿಯಾದ ಲಾಸ್‌ಏಂಜಲಿಸ್‌ನಲ್ಲಿ ವಾಸವಾಗಿದ್ದಾರೆ.ಜಾಸ್ಮಿನ್ ಅಮೆರಿಕದಲ್ಲೇ ವಾಸವಿದ್ದು ಆಗಾಗ ಪ್ರಯಾಣದ ವಿಡಿಯೊಗಳನ್ನು ಹಂಚಿಕೊಳ್ಳುತ್ತಾರೆ.ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಫೋಟೊದಲ್ಲಿ ಸಿದ್ದಾರ್ಥ್ ಬಿಳಿ ಬಣ್ಣದ ಶರ್ಟ್ ಮತ್ತು ಗುಲಾಬಿ ಬಣ್ಣದ ಉಡುಗೆ ತೊಟ್ಟಿದ್ದಾರೆ. ಜಾಸ್ಮಿನ್ ತಿಳಿ ಹಸಿರು ಬಣ್ಣದ ಉಡುಪಿನಲ್ಲಿ ಕಂಗೊಳಿಸಿದ್ದಾರೆ.