Join The Telegram | Join The WhatsApp |
ಬೆಳಗಾವಿ :
ಭೂತರಾಮನಟ್ಟಿಯ ಶ್ರೀಕ್ಷೇತ್ರ ಮುಕ್ತಿಮಠದ ಜಾತ್ರಾ ಮಹೋತ್ಸವ ಮೂರು ದಿನಗಳ ಕಾಲ ಅದ್ದೂರಿಯಾಗಿ ಜರುಗಿದ್ದು, ಜ.18 ರಂದು ಶ್ರೀಗಳ ಅಡ್ಡ ಪಲ್ಲಕ್ಕಿ ಉತ್ಸವ ಜರುಗಲಿದೆ.
ಐದು ದಿನಗಳ ಕಾಲ ಪ್ರತಿನಿತ್ಯ ಬೆಳಗ್ಗೆ ಕ್ಷೇತ್ರಾದಿ ದೇವತೆಗಳಿಗೆ ಅರ್ಚನೆಗಳು, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಧರ್ಮಸಭೆ, ಮಹಾದೀಪಾರಾಧನೆ, ಪ್ರಸಾದ ವಿನಿಯೋಗ ಹಾಗೂ ಮನರಂಜನೆ ಕಾರ್ಯಕ್ರಮಗಳು ನಡೆದಿವೆ.
ಜ.18 ರಂದು ಬೆಳಗ್ಗೆ 10ಕ್ಕೆ ಶಿವಪಾರ್ವತಿಯರ ಕಲ್ಯಾಣೋತ್ಸವ ಸಮಾರಂಭ ನಡೆಯಲಿದೆ. ಬೆಳಗ್ಗೆ 11ಕ್ಕೆ ಗುಗ್ರಾನಟ್ಟಿ ಹೊಸೂರು ಗ್ರಾಮದಿಂದ ಮುಕ್ತಿಮಠದವರೆಗೆ ಶ್ರೀ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಅಡ್ಡ ಪಲ್ಲಕ್ಕಿ ಉತ್ಸವ ನಡೆಯಲಿದೆ ಜರುಗಲಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ ಡಾ.ಜಗದೀಶ ಜೆ. ಹಿರೇಮಠ ಅವರಿಗೆ ಜಾತ್ರಾ ಮಹೋತ್ಸವದಲ್ಲಿ ಶ್ರೀಗಳು ವೈದ್ಯರತ್ನ ಪ್ರಶಸ್ತಿ ನೀಡಿ ಗೌರವಿಸುವರು. ಚಿತ್ರ ರಂಗದಲ್ಲಿ ಅಪಾರ ಸಾಧನೆಗೈದ ಕರ್ನಾಟಕದ ದಿಗ್ಗಜ ನಟ ದೊಡ್ಡಣ್ಣ ಅವರು ಮುಕ್ತಿಮಠದ ಜಾತ್ರಾ ಮಹೋತ್ಸವಕ್ಕೆ ಆಗಮಿಸಲಿದ್ದಾರೆ ಎಂದು ಶ್ರೀ ಕ್ಷೇತ್ರ ಮುಕ್ತಿಮಠದ ಕಾರ್ಯಕಾರಿ ಸಮಿತಿ ತಿಳಿಸಿದೆ.
Join The Telegram | Join The WhatsApp |