Join The Telegram | Join The WhatsApp |
ಮೈಸೂರು :
ಮೈಸೂರು ಬೆಂಗಳೂರು ದಶ ಪಥ ಎಕ್ಸ್ಪ್ರೆಸ್ ಹೈವೇಗೆ ಕಾವೇರಿ ಎಕ್ಸ್ ಪ್ರೆಸ್ ವೇ ಎಂದು ಹೆಸರಿಡಲು ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದರು.
ಮುಕ್ತಾಯದ ಹಂತದಲ್ಲಿರುವ ಮೈಸೂರು ಬೆಂಗಳೂರು ನಡುವಿನ 119 ಕಿಲೋಮೀಟರ್ ಅಂತರದ ದಶಪಥ ಎಕ್ಸ್ಪ್ರೆಸ್ ಹೆದ್ದಾರಿಗೆ ಕಾವೇರಿ ಹೆಸರನ್ನು ಇಟ್ಟು ಕಾವೇರಿ ಎಕ್ಸ್ಪ್ರೆಸ್ ವೆ ಎಂದು ನಾಮಕರಣ ಮಾಡುವಂತೆ ಸಂಸದ ಪ್ರತಾಪ್ ಸಿಂಹ ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರಿಗೆ ನವದೆಹಲಿಯಲ್ಲಿ ಮನವಿ ಸಲ್ಲಿಸಿದರು. ಕೊಡಗಿನ ತಲಕಾವೇರಿಯಲ್ಲಿ ಜನಿಸಿ ಕರ್ನಾಟಕದ ಜೀವನದಿ ಎನಿಸಿರುವ ಕಾವೇರಿ ಯೊಂದಿಗೆ ಕೊಡಗು ಮೈಸೂರು ಮಂಡ್ಯ ಮತ್ತು ಬೆಂಗಳೂರು ಜನತೆಗೆ ಭಾವನಾತ್ಮಕ ಸಂಬಂಧವಿದೆ . ಪಶ್ಚಿಮ ಘಟ್ಟದಲ್ಲಿ ಉಗಮಿಸುವ ಕಾವೇರಿ ಎಂಬ ಪವಿತ್ರ ಹೆಸರನ್ನೇ ಎಕ್ಸ್ಪ್ರೆಸ್ ಹೆದ್ದಾರಿಗೆ ಇಡುವುದು ಅತ್ಯಂತ ಸೂಕ್ತ ಎಂದು ಪ್ರತಾಪ್ ಸಿಂಹ ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಕಾವೇರಿ ಎಕ್ಸ್ಪ್ರೆಸ್ ವೇ ಹೆಸರಿಗೆ ಸಚಿವ ನಿತಿನ್ ಗಡ್ಕರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
Join The Telegram | Join The WhatsApp |