ಮುಂಬೈ: ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೊವಾ ಅವರು 71 ವಿಶ್ವ ಸುಂದರಿಯಾಗಿ ಆಯ್ಕೆಯಾಗಿದ್ದಾರೆ. ಇಲ್ಲಿ ನಡೆದ ಭವ್ಯ ಸಮಾರಂಭದಲ್ಲಿ 24 ವರ್ಷದ ಕ್ರಿಸ್ಟಿನಾ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡರು.
ಅವರು 115 ದೇಶಗಳ ಸ್ಪರ್ಧಿಗಳೊಂದಿಗೆ ಪೈಪೋಟಿ ನಡೆಸಿದರು. ಕಳೆದ ವರ್ಷದ ವಿಶ್ವಸುಂದರಿ ವಿಜೇತೆ ಪೋಲೆಂಡ್‌ನ ಕರೋಲಿನಾ ಬಿಲಾನ್ಸಾ, ಕ್ರಿಸ್ಟಿನಾ ಮುಡಿಗೆ ವಿಶ್ವಸುಂದರಿ ಕಿರೀಟಧಾರಣೆ ಮಾಡಿದರು. ಲೆಬನಾನ್ ನ ಯಾಸ್ಮಿನಾ ಜೈಟೌನ್ ಮೊದಲ ರನ್ನರ್ ಅಪ್ ಕಿರೀಟವನ್ನು ಪಡೆದರು. ಭಾರತದ ಸಿನಿ ಶೆಟ್ಟಿ ಟಾಪ್ 8ರೊಳಗೆ ಹೋಗಿದ್ದರು. ಆದರೆ, ಟಾಪ್ 4ಗೆ ಹೋಗಲು ವಿಫಲರಾದರು. ಏಷ್ಯಾದಿಂದ ಸ್ಪರ್ಧೆ ನೀಡಿದ್ದ ಲೆಬೆನಾನ್‌ನ ಯಾಸ್ಮಿನಾ ಸಿನಿ ಶೆಟ್ಟಿ ಯನ್ನು ಹಿಂದಕ್ಕೆ ಹಾಕಿದರು.
ಕ್ರಿಸ್ಟಿನಾ ಕಾನೂನು ಮತ್ತು ವ್ಯವಹಾರ ಆಡಳಿತ ಎರಡರಲ್ಲೂ ಪದವಿ ಅಧ್ಯಯನ ಮಾಡುತ್ತಿದ್ದಾರೆ ಮತ್ತು ರೂಪದರ್ಶಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. ಅವರು ಕ್ರಿಸ್ಟಿನಾ ಫೌಂಡೇಶನ್ ಅನ್ನು ಸ್ಥಾಪಿಸಿದ್ದಾರೆ ಎಂದು ಮಿಸ್ ವರ್ಲ್ಡ್ ಆರ್ಗನೈಸೇಶನ್ ತಿಳಿಸಿದೆ.
ಮುಂಬಯಿಯಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಕಳೆದ ಬಾರಿಯ ವಿಜೇತೆ ಪೋಲೆಂಡ್‌ನ ಕರೋಲಿನಾ ಬಿಲಾವ್ಸ್ಕಾ ಅವರು ಕ್ರಿಸ್ಟಿನಾಗೆ ವಿಶ್ವ ಸುಂದರಿ ಕಿರೀಟ ತೊಡಿಸಿದರು. ಲೆಬನಾನ್ ನ ಯಾಸ್ಮಿನಾ ಜೈತೌನ್ ಮೊದಲ ರನ್ನರ್ ಅಪ್ ಆಗಿದ್ದಾರೆ. ಮಿಸ್ ವರ್ಲ್ಡ್ 2024 ರ ವಿಜೇತರನ್ನು ಬಹಿರಂಗಪಡಿಸುವ ಮೊದಲು ಅಂತಿಮ ಸ್ಪರ್ಧಿಗಳು ಪ್ರಶ್ನೋತ್ತರ ಸುತ್ತು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿದರು. ಮಾಜಿ ವಿಶ್ವ ಸುಂದರಿ ಮೇಗನ್ ಯಂಗ್ ಮತ್ತು ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಈ ಕಾರ್ಯಕ್ರಮವನ್ನು ನಿರೂಪಿಸಿದರು.
ವಿಶೇಷ ಎಂದರೆ ವಿಶ್ವ ಸುಂದರಿ ಸ್ಪರ್ಧೆಯ ಆತಿಥ್ಯವನ್ನು ಭಾರತ ಬರೋಬ್ಬರಿ 28 ವರ್ಷಗಳ ಬಳಿಕ ವಹಿಸಿತ್ತು. 1996ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯನ್ನು ಭಾರತವು ಕೊನೆಯದಾಗಿ ಆಯೋಜಿಸಿತ್ತು. ಬೆಂಗಳೂರಿನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಗ್ರೀಸ್‌ನ 19ರ ಹರೆಯದ ಐರಿನ್ ಸ್ಕ್ಲಿವಾ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದರು.