
ಬೀಜಾಡಿ : ಸೀತಾರಾಮ ಪೂಜಾರಿ ಪಡು ಹೆಬ್ರಿ ಮನೆ.ಬೀಜಾಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರಾಗಿ ಸತತ ಮೂರನೇ ಬಾರಿಗೆ ಅವಿರೋಧ ಆಯ್ಕೆಯಾಗಿರುತ್ತಾರೆ.
ಸೀತಾರಾಮ್ ಪೂಜಾರಿ ಇವರು ಬೀಜಾಡಿ – ಗೋಪಾಡಿ ಗ್ರಾಮ ಪಂಚಾಯಿತಿ ಯ ಉಪಾಧ್ಯಕ್ಷ ರಾಗಿಯೂ ಕೂಡ ಈ ಹಿಂದೆ ಸೇವೆ ಸಲ್ಲಿಸಿದ್ದಾರೆ.ಕುಂದಾಪುರ ತಾಲೂಕಿನ ಹಲವಾರು ಸಂಘ ಸಂಸ್ಥೆಗಳ ಜೊತೆಗೆ ಸೇರಿ ನೂರಾರು ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಲು ಸಾಕಷ್ಟು ಶ್ರಮಿಸಿರುತ್ತಾರೆ.ಬೀಜಾಡಿ ಶ್ರೀ ರಘುರಾಮ ಭಜನಾ ಮಂದಿರ ಕಟ್ಟುವಲ್ಲಿ ಸೀತಾರಾಮ ಪೂಜಾರಿ ಯವರು ಬಹಳ ಶ್ರಮಿಸಿರುತ್ತಾರೆ.ಬೀಜಾಡಿ ಗೋಪಾಡಿ ಪರಿಸರದಲ್ಲಿ ಹಲವಾರು ವರ್ಷಗಳ ಹಿಂದೆ ಕರಾವಳಿ ಯುವಕ ಮಂಡಲ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿ ರುತ್ತಾರೆ.ಬೀಜಾಡಿ ಗೋಪಾಡಿ ಪರಿಸರದಲ್ಲಿ ಕರಾವಳಿ ಯುವಕ ಮಂಡಲ ದೊಡ್ಡಮಟ್ಟದಲ್ಲಿ ಸದ್ದು ಮಾಡಿದ್ದಲ್ಲದೆ ರಾಜ್ಯಾದ್ಯಂತ ಹೆಸರು ಮಾಡಿದ ಪರಿಸರದ ಸಂಸ್ಥೆ ಆಗಿತ್ತು.
ಬೀಜಾಡಿ ಹಾಲು ಉತ್ಪಾದಕರ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣ,ಬೀಜಾಡಿ ಹಾಲು ಡೈರಿ ಗೆ ಹಾಲು ನೀಡುವವರಿಗೆ ಉತ್ಪಾದನೆಯಲ್ಲಿ ಸರ್ಕಾರದಿಂದ ಏನಾದರೂ ಸಹಾಯ ಸಹಕಾರ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವ ಜೊತೆ ಇದೇ ಪರಿಸರದ ಹಳವಳ್ಳಿ ಭಾಗದಲ್ಲಿ ಹಾಲು ಪಡೆಯುವ ಸಹ ಸಂಸ್ಥೆ ಸ್ಥಾಪನೆ ಹೀಗೆ ಹತ್ತು ಹಲವಾರು ಪ್ರಯತ್ನಗಳಿಂದ ಬೀಜಾಡಿ ಹಾಲು ಉತ್ಪಾದಕರ ಸಂಘ ಸದೃಢವಾಗಿ ಬೆಳೆಯಲು ಸತತ ಪ್ರಯತ್ನಿಸಿರುತ್ತಾರೆ.
ಈ ಬಾರಿ ಯೂ ಸಂಘದ ಸತತ ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಹೊಸ ಸಂಚಲನವನ್ನೇ ಹುಟ್ಟು ಹಾಕಿರುತ್ತದೆ.
ವರದಿ ಲೇಖನ
*ಎಸ್ ಸತೀಶ್ ಕುಮಾರ್ ಕೋಟೇಶ್ವರ ಸಂಪಾದಕರು,ಅಧ್ಯಾತ್ಮ ರಹಸ್ಯ ಮಾಸಪತ್ರಿಕೆ ಕೋಟೇಶ್ವರ.
ಅಧ್ಯಕ್ಷರು ಕುಂದಾಪುರ ತಾಲೂಕು ಪತ್ರಕರ್ತರ ಸಂಘ (ರಿ.) ಕುಂದಾಪುರ.
9964183229/9620472014
adhyathmarahasya1@gmail.com