
ಪುತ್ತೂರು: ಪುತ್ತೂರಿನ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆಯ ಅಂಚೆ ಕಚೇರಿ ಬಳಿ ರಸ್ತೆಗೆ ತಾಗಿಕೊಂಡು ಕಲ್ಲು ಇಡಲಾಗಿದ್ದು ಇದರಿಂದ ಸಾರ್ವಜನಿಕರ ಓಡಾಟಕ್ಕೆ ಅಡಚಣೆಯಾಗುತ್ತಿದ್ದು ತೆರವುಮಾಡುವಂತೆ ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡಲಾಗಿತ್ತು.
ಮನವಿಗೆ ಸ್ಪಂದಿಸಿದ ಶಾಸಕ ಅಶೋಕ್ ರೈ ಅವರು ನಗರಸಭಾ ಕಮಿಷನರ್ ಗೆ ಮಾಹಿತಿ ನೀಡಿ ರಸ್ತೆ ಬದಿ ಇಡಲಾಗಿದ್ದ ಕಲ್ಲನ್ನು ತಕ್ಷಣ ತೆರವು ಮಾಡಿದ್ದಾರೆ. ಇಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಯಾರೋ ಕಲ್ಲು ಹಾಕಿದ್ದರು ಎಂಬುದು ಗೊತ್ತಾಗಿಲ್ಲ. ಶಾಸಕರ ಸ್ಪಂದನೆಗೆ ಸಾರ್ವಜನಿಕರಿಂದ ಹಾಗೂ ದೇವಳದ ಭಕ್ತರಿಂದ ಶ್ಲಾಘನೆ ವ್ಯಕ್ತವಾಗಿದೆ.