ಬೆಂಗಳೂರು :
ಮಾಜಿ ಸಚಿವ ಸೋಮಣ್ಣ ನನ್ನ ಬಳಿ ಮಾತನಾಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಅವರು ಹೇಳಿದ್ದಷ್ಟು :
ಸೋಮಣ್ಣ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆ ಬಗ್ಗೆ ಚರ್ಚೆ ನಡೆಯುತ್ತಿದೆಯಲ್ಲ ಎಂದು ಕೇಳಿದಾಗ, “ಸೋಮಣ್ಣ ಅವರು ನನ್ನ ಬಳಿ ಈ ವಿಚಾರವಾಗಿ ಏನೂ ಮಾತನಾಡಿಲ್ಲ. ಅವರ ದುಃಖ, ದುಮ್ಮಾನಗಳನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಅವರು ನಮ್ಮ ತಾಲೂಕಿನವರು, ಹಿರಿಯ ನಾಯಕರು. ಅವರು ಎರಡು ಕಡೆ ನಿಂತು ಸೋತರು. ಅವರು ಅಲ್ಲಿ ಏಕೆ ಹೋದರು ಎಂಬುದೇ ನನಗೆ ವಿಸ್ಮಯ ಹಾಗೂ ದೊಡ್ಡ ಪ್ರಶ್ನೆಯಾಗಿದೆ. ಅವರ ಬಗ್ಗೆ ನಾನು ಮಾತನಾಡುವುದಿಲ್ಲ” ಎಂದು ತಿಳಿಸಿದರು.