ದೆಹಲಿ: ಅಡುಗೆ ಅನಿಲ ಸಿಲಿಂಡರ್‌ಗಳ ಕಳವು ತಡೆಯಲು ಮತ್ತು ಅವುಗಳ ದಾಸ್ತಾನು ನಿರ್ವಹಣೆಗೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಶೀಘ್ರವೇ ಕ್ಯೂಆರ್ ಕೋಡ್ ಹೊಂದಿರುವ ಸಿಲಿಂಡರ್ ಗಳು ಲಭ್ಯವಾಗಲಿದೆ. ಪೆಟ್ರೋಲಿಯಂ ಹಾಗೂ ಸ್ಫೋಟಕ ಸುರಕ್ಷತಾ ಸಂಸ್ಥೆಯ ಎಲ್ಲಾ ಪಾಲುದಾರರೊಂದಿಗೆ ಸಭೆ ನಡೆಸಿದ ನಂತರ ಕೇಂದ್ರ ಸಚಿವ ಪಿಯುಷ್ ಗೋಯಲ್ ಈ ಮಾಹಿತಿ ನೀಡಿದ್ದಾರೆ.

ಸಿಲಿಂಡರ್ ಟ್ರಾಕಿಂಗ್, ಟ್ರೇಸಿಂಗ್ ಮತ್ತು ನಿರ್ವಹಣೆಗೆ ಈ ಕ್ರಮ ಸಹಾಯಕಾರಿಯಾಗಲಿದೆ.

ಜನವಸತಿ ಬಳಿ ಪೆಟ್ರೋಲ್ ಪಂಪ್ ನಿಯಮ ರೂಪಿಸಲು ಸೂಚನೆ ನೀಡಿರುವ ಸಚಿವರು, ಜನವಸತಿಯ 35 ರಿಂದ 50 ಮೀಟರ್ ಅಂತರದಲ್ಲಿ ಪೆಟ್ರೋಲ್ ಪಂಪ್ ತೆರೆಯಲು ಅವಕಾಶ ಕಲ್ಪಿಸುವಲ್ಲಿ ಸುರಕ್ಷತಾ ಕ್ರಮ ಮಾದರಿ ರೂಪಿಸುವಂತೆ ಪೆಟ್ರೋಲ್ ಮತ್ತು ಸ್ಪೋಟಕ ಸುರಕ್ಷತಾ ಸಂಸ್ಥೆಗಳಿಗೆ ಅವರು ಸೂಚನೆ ನೀಡಿದ್ದಾರೆ.