ಬೆಂಗಳೂರು : ಬೆಂಗಳೂರಿನ ರಾಗಿಗುಡ್ಡದಲ್ಲಿ ದಕ್ಷಿಣ ಭಾರತದ ಅತಿ ಎತ್ತರದ ರೋಡ್-ಕಮ್-ರೈಲು ಮೇಲ್ಸೇತುವೆಯನ್ನು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಲೋಕಾರ್ಪಣೆ ಮಾಡಿದರು.
449 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಡಬ್ಬಲ್‌ ಡೆಕ್ಕರ್‌ ಫ್ಲೈ ಓವರ್‌ ನ್ನು ನಿರ್ಮಾಣ ಮಾಡಲಾಗಿದ್ದು, ಇದು ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್‌ವರೆಗೆ ನಿರ್ಮಾಣವಾಗಿದೆ. ಡಬ್ಬಲ್ ಡೆಕ್ಕರ್‌ ಮೊದಲ ಫ್ಲೈ ಓವರ್‌ ಎರಡೂ ಬದಿಗಳಲ್ಲಿ ಎರಡು ರಸ್ತೆ ಮಾರ್ಗ ನಿರ್ಮಿಸಲಾಗಿದ್ದು, ಇಲ್ಲಿ ಬಸ್ಸು, ಕಾರು ಸೇರಿ ಎಲ್ಲಾ ರೀತಿಯ ವಾಹನಗಳು ಸಂಚರಿಸಲಿವೆ. ಎರಡನೇ ಫ್ಲೈ ಓವರ್‌ ಮಾರ್ಗದಲ್ಲಿ ಮೆಟ್ರೋ ರೈಲು ಸಂಚರಿಸಲಿದೆ. ಮೆಟ್ರೋ ಕಂಬಕ್ಕೆ ಎರಡೂ ಬದಿಯಲ್ಲಿ ರೆಕ್ಕೆಗಳ ರೀತಿಯಲ್ಲಿ ಈ ಸೇತುವೆ ನಿರ್ಮಾಣ ಮಾಡಲಾಗಿದೆ.

ಮೇಲ್ಸೇತುವೆಯಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಆಗುತ್ತಿದ್ದ ದಟ್ಟಣೆ ಕಡಿಮೆಯಾಗಲಿದೆ 449 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಡಬ್ಬಲ್‌ ಡೆಕ್ಕರ್‌ ಫ್ಲೈ ಓವರ್‌ ಅನ್ನು ನಿರ್ಮಾಣ ಮಾಡಲಾಗಿದ್ದು, ಎಲಿವೇಟೆಡ್ ರಸ್ತೆಯ ಮೇಲೆ ಮೆಟ್ರೋ ಮಾರ್ಗವನ್ನು ಹೊಂದಿರುವ ದಕ್ಷಿಣ ಭಾರತದಲ್ಲಿ ಇದು ಮೊದಲ ಫ್ಲೈಓವರ್ ಆಗಿದೆ.
ಎಲೆಕ್ಟ್ರಾನಿಕ್ಸ್ ಸಿಟಿಯ ಉದ್ಯೋಗಿಗಳು ಟ್ರಾಫಿಕ್ ಜಾಮ್ ನಿಂದ ಮುಕ್ತಿ ಪಡೆಯಲಿದ್ದಾರೆ. 3.3 ಕಿಮೀವರೆಗೆ ತಡೆ ರಹಿತ ಸಂಚಾರ ಇರಲಿದೆ. ಹೀಗಾಗಿ ಒಮ್ಮೆ ಫ್ಲೈ ಓವರ್‌ ಹತ್ತಿದರೆ 3.3 ಕಿಮೀವರೆಗೆ ಎಲ್ಲಿಯೂ ಇಳಿಯಲು ಅವಕಾಶವಿಲ್ಲ , ಎರಡು ಕಡೆ ಮಾತ್ರ ಯೂ ಟರ್ನ್ ಮಾಡಲು ಅವಕಾಶ ಮಾಡಿಕೊಡಲಾಗಿದೆ‌.
ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಮಾರೇನಹಳ್ಳಿ ರಸ್ತೆಯಲ್ಲಿ 31 ಮೀಟರ್ ಎತ್ತರದಲ್ಲಿ ಮೇಲ್ಸೇತುವೆಯನ್ನು ನಿರ್ಮಿಸಿದ್ದು, ಆರ್‌ವಿ ರಸ್ತೆ-ಬೊಮ್ಮಸಂದ್ರ ಮೆಟ್ರೋ ಮಾರ್ಗವನ್ನು ಎರಡನೇ ಹಂತದಲ್ಲಿ ಹಾಕಲಾಗಿದೆ. ಎಲಿವೇಟೆಡ್ ರಸ್ತೆಯ ಮೇಲೆ ಮೆಟ್ರೋ ಮಾರ್ಗವನ್ನು ಹೊಂದಿರುವ ದಕ್ಷಿಣ ಭಾರತದಲ್ಲಿ ಇದು ಮೊದಲ ಫ್ಲೈಓವರ್ ಆಗಿದೆ.