ಬೆಂಗಳೂರು: ಜೂನ್ 14ರಿಂದ ಆರಂಭವಾಗುವ
ಎಸ್ಸೆಸ್ಸೆಲ್ಸಿ ಪರೀಕ್ಷೆ 2’ಕ್ಕೆ ನೋಂದಾಯಿಸಿರುವ ಶಾಲಾ
ವಿದ್ಯಾರ್ಥಿಗಳಿಗೆ ಮೇ 29 ರಿಂದ ಜೂ.13 ರವರೆಗೆ ವಿಶೇಷ ಬೋಧನಾ ತರಗತಿಗಳು ಆರಂಭವಾಗಲಿವೆ. ವಿದ್ಯಾರ್ಥಿಗಳು ತಾವು ವ್ಯಾಸಂಗ ಮಾಡಿದ ಪ್ರೌಢಶಾಲೆಗಳಿಗೆ ತೆರಳಿ ಈ ತರಗತಿಗಳ ಪ್ರಯೋಜನ ಪಡೆಯಬಹುದು. ಎಸ್ಸೆಸ್ಸೆಲ್ಸಿ ಪರೀಕ್ಷೆ 1ರಲ್ಲಿ ಫಲಿತಾಂಶ ಶೇ.10ರಷ್ಟು ಕುಸಿತವಾದ ಹಿನ್ನೆಲೆಯಲ್ಲಿ ಅನುತ್ತೀರ್ಣ ಹಾಗೂ ಫಲಿತಾಂಶ ಉತ್ತಮಪಡಿಸಿಕೊಳ್ಳಲಿಚ್ಛಿಸುವ ವಿದ್ಯಾರ್ಥಿಗಳಿಗೆ ಮೇ 15ರಿಂದ ಜೂ.6ರವರೆಗೆ ಬೇಸಿಗೆ ರಜೆ ಅವಧಿಯಲ್ಲಿ ‘ವಿಶೇಷ ಬೋಧನಾ ತರಗತಿ’ ನಡೆಸಲು ಶಿಕ್ಷಣ ಇಲಾಖೆ ಆದೇಶಿಸಿತ್ತು. ಇದಕ್ಕೆ ಶಿಕ್ಷಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ 2024-25ನೇ ಶೈಕ್ಷಣಿಕ ಸಾಲು ಆರಂಭವಾಗುವ ಮೇ 29ರಿಂದ ಜೂ.13ರವರೆಗೆ ಈ ವಿಶೇಷ ತರಗತಿ ನಡೆಸುವಂತೆ ಪರಿಷ್ಕರಿಸಲಾಗಿತ್ತು.