ಬೆಳಗಾವಿ : 1892ರ ಅಕ್ಟೋಬರ್ 16ರಂದು ಸ್ವಾಮಿ ವಿವೇಕಾನಂದರು ಬೆಳಗಾವಿ ರಿಸಾಲ್ದಾರ್ ಗಲ್ಲಿಯಲ್ಲಿರುವ ಬಾಟೆಯವರ ಮನೆ(ಸ್ವಾಮಿ ವಿವೇಕಾನಂದ ಸ್ಮಾರಕ)ಗೆ ಭೇಟಿ ನೀಡಿದ ಪವಿತ್ರ ದಿನ. ಸ್ವಾಮೀಜಿಗಳು ಇಲ್ಲಿ ಮೂರು ದಿನಗಳ ಕಾಲ ತಂಗಿದ್ದರು. ಸ್ಮರಣೀಯ ದಿನವಾದ ಹಿನ್ನೆಲೆಯಲ್ಲಿ ಅಕ್ಟೋಬರ್ 16ರಂದು ಬೆಳಗಾವಿ ರಿಸಾಲ್ದಾರ ಗಲ್ಲಿಯಲ್ಲಿರುವ ಈ ಸ್ಮಾರಕದಲ್ಲಿಂದು ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ಸಾರ್ವಜನಿಕರಿಗೆ ಭೇಟಿ ನೀಡಲು ಅಹ್ವಾನಿಲಾಗಿದೆ. ಸಂಜೆ 5:45 ರಿಂದ 7:15 ರವರೆಗೆ ಭಜನೆ ಮತ್ತು ಪ್ರವಚನ ಕನ್ನಡ ಹಾಗೂ ಮರಾಠಿಯಲ್ಲಿ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮ ಸಂಜೆ 7:15 ರಿಂದ 8:45 ರವರೆಗೆ ನಡೆಯಲಿದ್ದು ಬೊಂಬೆಯಾಟ-ಸ್ವಾಮಿ ವಿವೇಕಾನಂದರ ಜೀವನ ಕುರಿತು ನಡೆಯಲಿದ್ದು ಬೆಂಗಳೂರಿನ ರಂಗಪುಥಳಿ ತಂಡದವರಿಂದ ಏರ್ಪಡಿಸಲಾಗಿದೆ.