ದೆಹಲಿ : ವಂದೇ ಭಾರತ, ಗತಿಮಾನ್ ಎಕ್ಸ್ ಪ್ರೆಸ್ ಸೇರಿದಂತೆ ದೇಶದ ಅತಿ ವೇಗದ ರೈಲುಗಳ ವೇಗವನ್ನು ಕಡಿತಗೊಳಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಗಂಟೆಗೆ 160 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದ್ದ ಈ ರೈಲುಗಳ ವೇಗ ಈಗ 120ಕ್ಕೆ ಇಳಿಕೆಯಾಗಿದೆ. ಕಾಂಚನಗಂಗಾ ಎಕ್ಸ್ ಪ್ರೆಸ್ ರೈಲು ದುರಂತದ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ರೈಲುಗಳ ವೇಗ ಕಡಿತದಿಂದ ಇನ್ನು ಮುಂದೆ ರೈಲು ಪ್ರಯಾಣದ ಅವಧಿ ಹೆಚ್ಚಾಗಲಿದೆ. ರೈಲ್ವೆ ಇಲಾಖೆ ಈ ನಿರ್ಧಾರ ಯಾವ ರೀತಿ ಪರಿಣಾಮ ಬೀರುತ್ತದೆ ಕಾದು ನೋಡಬೇಕು. ಇನ್ನು ಮುಂದೆ ಪ್ರಯಾಣದ ಅವಧಿ ಇನ್ನು 30 ನಿಮಿಷ ಹೆಚ್ಚಳವಾಗಲಿದೆ.