
ಹೆಬ್ರಿ : ಕ್ರೀಡಾ ಭಾರತಿ ಹೆಬ್ರಿ ತಾಲೂಕು ಘಟಕ ಹಾಗೂ ಪಾಂಡುರಂಗ ರಮಣ ನಾಯಕ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಹೆಬ್ರಿ ಬಾಲಕೃಷ್ಣ ಮಲ್ಯ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಾಚೀನವಾದ ಭಾರತದ ಕೊಡುಗೆ ಯೋಗ ಇಂದು ನರೇಂದ್ರ ಮೋದಿಯವರ ಒತ್ತಾಸೆಯ ಮೇರೆಗೆ ವಿಶ್ವಮಟ್ಟದಲ್ಲಿ ಪ್ರಚಲಿತಗೊಂಡು, ವಿಶ್ವ ಯೋಗ ದಿನಾಚರಣೆ ಯಾಗಿ ಸಂಭ್ರಮವನ್ನು ಕಾಣುತ್ತಿದೆ ವಿಶ್ವದ 190ಕ್ಕೂ ಹೆಚ್ಚು ದೇಶಗಳು ಈ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸುತ್ತಿವೆ . ಅಷ್ಟಾಂಗ ಯೋಗಗಳಾದ ಯಮ, ನಿಯಮ, ಆಸನ , ಪ್ರಾಣಾಯಾಮ, ಪ್ರತ್ಯಾಹಾರ , ಧಾರಣ, ಧ್ಯಾನ , ಸಮಾಧಿ ಮತ್ತು ಪ್ರಾಣಾಯಾಮ ಇವುಗಳನ್ನು ನಿತ್ಯ ನಿರಂತರವಾಗಿ ಪಾಲಿಸಿಕೊಂಡು ಬಂದರೆ ನಮ್ಮಲ್ಲಿ ಯಾವುದೇ ಆರೋಗ್ಯ ಸಮಸ್ಯೆಗಳು ಕಂಡು ಬರುವುದಿಲ್ಲ ಎಂದರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ರಾಜೇಶ್ ನಾಯಕ್ , ಕ್ರೀಡಾ ಭಾರತಿ ಕಾರ್ಯದರ್ಶಿ ವಿಜಯ್ ಕುಮಾರ್ ಶೆಟ್ಟಿ, , ಚೀಫ್ ವಾರ್ಡನ್ ನಿತಿನ್, ಕ್ರೀಡಾ ಭಾರತಿ ಸದಸ್ಯರಾದ ದೈಹಿಕ ಶಿಕ್ಷಕ ರವೀಂದ್ರ ಶೆಟ್ಟಿ , ಪ್ರವೀಣ್ ಹೆಗ್ಡೆ, ಪಾವನ ಶೆಟ್ಟಿ , ಮಾಲಿನಿ ಉಪಸ್ಥಿತರಿದ್ದರು. ಹಾಸ್ಟೆಲ್ ವಿದ್ಯಾರ್ಥಿಗಳು, ಶಿಕ್ಷಕರು , ನಿಲಯಪಾಲಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ವಿಜಯ್ ಕುಮಾರ್ ನಿರೂಪಿಸಿ ವಂದಿಸಿದರು.