ಬೆಳಗಾವಿ: ವಡಗಾವಿ ಯಳ್ಳೂರು ರಸ್ತೆಯ ಶ್ರೀ ಅನ್ನಪೂರ್ಣೇಶ್ವರಿ ನಗರದ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ವಾರ್ಷಿಕ ಮಹೋತ್ಸವ ರವಿವಾರ ಸಂಪನ್ನವಾಯಿತು.

ಉಡುಪಿ ಜಿಲ್ಲೆ ಉಚ್ಚಿಲದ ವಿಶ್ವನಾಥ ಜೋಯಿಸರ ನೇತೃತ್ವದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನೆರವೇರಿತು.
ಶುಕ್ರವಾರ ಪ್ರಾರ್ಥನೆ, ವಾಸ್ತು ಶುದ್ದಿ, ವಾಸ್ತು ಹೋಮ, ಸಾಂಗ್ಲಿಯ ಬಾಲಕೃಷ್ಣ ಮುಳೆ ಅವರಿಂದ ಕೀರ್ತನೆ, ಶನಿವಾರ ಶ್ರೀ ಅನ್ನಪೂರ್ಣೇಶ್ವರಿ ದೇವಿ ಮತ್ತು ಪರಿವಾರ ದೇವರಿಗೆ ಕಳಶಾಭಿಷೇಕ, ಪುಣ್ಯಾಹ ವಾಚನ, ಗಣಹೋಮ, ನವಗೃಹ ಹೋಮ, ಅನ್ನಪೂರ್ಣೇಶ್ವರಿ ಯಾಗ, ಮಹಾಪೂಜೆ, ಪ್ರಸನ್ನ ಪೂಜೆ, ರಂಗಪೂಜೆ, ಶ್ರೀದೇವಿಯ ಪಲ್ಲಕ್ಕಿ ಮೆರವಣಿಗೆ, ದೀಪೋತ್ಸವ ನಡೆಯಿತು. ಮೆರವಣಿಗೆಯಲ್ಲಿ ಮಂಗಳೂರಿನ ಸುಪ್ರಸಿದ್ಧ ಹುಲಿವೇಷಧಾರಿಗಳು ಭಾಗವಹಿಸಿ ಭಕ್ತರನ್ನು ರಂಜಿಸಿದರು. ಕೇರಳದಿಂದ ಮಹಿಷಾಸುರ ಮರ್ದಿನಿ ಕುರಿತ ವಿಶೇಷ ತಂಡ ಆಗಮಿಸಿ ಕಾರ್ಯಕ್ರಮ ನೀಡಿತು.

ರವಿವಾರ ಸಂಪ್ರೋಕ್ಷಣೆ, ಸುಬ್ರಮಣ್ಯ ದೇವರಿಗೆ ಅಶ್ಲೇಷಾ ಬಲಿ ಪೂಜೆ, ಮಹಾ ಚಂಡಿಕಾ ಹೋಮ, ಮಹಾಪ್ರಸಾದ ನಡೆಯಿತು.