Join The Telegram | Join The WhatsApp |
ಪುಣೆ-
ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕವಾಗಿ ಸೆಣೆಸಾಡಿದ ಬಳಿಕ ಸೋಲು ಅನುಭವಿಸಿದೆ. ಪುಣೆಯಲ್ಲಿ ನಡೆದ ಎರಡನೇ T20I ಪಂದ್ಯದಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿದ ಶ್ರೀಲಂಕಾ 16 ರನ್‌ಗಳಿಂದ ಭಾರತವನ್ನು ಸೋಲಿಸಿತು, ಪ್ರವಾಸಿಗರು 3 ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದರು. ಜನೇವರಿ 7 ರಂದು ರಾಜ್‌ಕೋಟ್‌ನಲ್ಲಿ ನಿರ್ಣಾಯಕ ಪಂದ್ಯ ನಡೆಯಲಿದೆ.
ಶ್ರೀಲಂಕಾ ನೀಡಿದ 207 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ಒಂದು ಹಂತದಲ್ಲಿ ಹೀನಾಯ ಸೋಲು ಅನುಭವಿಸುವ ಭೀತಿಯನ್ನು ಎದುರಿಸಿತ್ತು. ಅಗ್ರ ಕ್ರಮಾಂಕದ ಆಟಗಾರರು ಮತ್ತೊಮ್ಮೆ ವೈಫಲ್ಯ ಅನುಭವಿಸಿದ ಕಾರಣ ಟೀಮ್ ಇಂಡಿಯಾ 57 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ಬಳಿಕ ಜೊತೆಯಾದ ಸೂರ್ಯಕುಮಾರ್ ಯಾದವ್ ಹಾಗೂ ಅಕ್ಷರ್ ಪಟೇಲ್ ಜೋಡಿ ಅದ್ಭುತವಾಗಿ ರನ್ ಮೇಲೇರಿಸುತ್ತಾ ಸಾಗಿದರು.ಸೂರ್ಯಕುಮಾರ್ ಯಾದವ್ 36 ಬಾಲ್ ಗೆ 51 ರನ್ ಗಳಿಸಿದರು.
31 ಎಸೆತ ಎದುರಿಸಿ 6 ಸಿಕ್ಸಗಳ ನೆರವಿನಿಂದ 65 ರನ್‌ಗಳಿಸಿದ ಅಕ್ಷರ್ ಪಟೇಲ್ ಭಾರತದ ಸೋಲಿನಲ್ಲೂ ವಿಶೇಷ ಪ್ರಶಂಸೆಗೆ ಪಾತ್ರವಾಗಿದ್ದಾರೆ. ಇನ್ನು ಶಿವಂ ಮಾವಿ ಕೂಡ 15 ಎಸೆತಗಳಲ್ಲಿ 26 ರನ್ ಸಿಡಿಸಿ ಗಮನಸೆಳೆದರು. ಅಂತಿಮವಾಗಿ ಟೀಮ್ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 190 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಯಿತು.
Join The Telegram | Join The WhatsApp |