ಘಟಪ್ರಭಾ: ಸಣ್ಣ ಸಣ್ಣ ವ್ಯಾಪಾರಸ್ಥರಿಗೆ ಅನುಕೂಲವಾಗಲು ಹಾಗೂ ಸಮಾಜದ ಕಟ್ಟಕಡೆ ವ್ಯಕ್ತಿಯು ಆರ್ಥಿಕವಾಗಿ ಬೆಳೆಯಲು ಸಹಕಾರಿಯ ಸಂಸ್ಥೆಗಳ ಪಾತ್ರ ಮುಖ್ಯವಾಗಿದೆ ಸಹಕಾರಿಯ ಪ್ರಮುಖ,ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರ ಮುಂದಾಳತ್ವದಲ್ಲಿ ಸಹಕಾರಿಯು ಪ್ರಗತಿಪತದಲ್ಲಿ ನಡೆಯುತ್ತಿದೆ ಎಂದು ಸಲಹಾ ಸಮಿತಿ ಅಧ್ಯಕ್ಷ ರಾಜು ಕತ್ತಿ ಹೇಳಿದರು.
ಸೋಮವಾರ ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ನಿ.,ಕಲ್ಲೋಳಿ ಶಾಖೆ ಘಟಪ್ರಭಾ ಇದರ ಎರಡನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಶ್ರೀ ಮಹಾಲಕ್ಷ್ಮೀ,ಸರಸ್ವತಿ ಭಾವಚಿತ್ರಕ್ಕೆ ದೀಪ ಬೆಳಗಿಸಿ ಮಾತನಾಡಿದ ಅವರು ಸಹಕಾರಿಯು ೨೧೦೧ ಸದಸ್ಯರನ್ನು ಹೊಂದಿ,೧೦.೯೧ ಕೋಟಿ ಠೇವು ಸಂಗ್ರಹಿಸಿ,೨.೩೯ ಕೋಟಿ ಗುಂತಾವಣೆ ಇಡಲಾಗಿದೆ,೮.೪೬ ಕೋಟಿ ಸಾಲ ವಿತರಿಸಲಾಗಿದೆ ಎಂದರು.
ಘಟಪ್ರಭಾ ಶಾಖೆಯ ಸಲಹಾ ಸಮಿತಿ ಉಪಾಧ್ಯಕ್ಷ ರಾಮಚಂದ್ರ ಕೊಡ್ಲಿ ಸದಸ್ಯರಾದ ಹಾಲಪ್ಪ ಕರಿಗಾರ,ಸತೀಶ ಪಾಟೀಲ,ಮಹಾಂತೇಶ ಉದಗಟ್ಟಿಮಠ,ಮಲಗೌಡ ಪಾಟೀಲ,ದುಂಡಪ್ಪ ನಿಂಗನ್ನವರ,ಭೀಮಶಿ ಬಂಗಾರಿ,ರವಿ ಉಪ್ಪಾರ,ಹಿರಿಯ ಶಾಖಾ ವ್ಯವಸ್ಥಾಪಕ ಪರಪ್ಪ ಗಿರೆಣ್ಣವರ,ರಾಜಶೇಖರ ಕುರಬೇಟ,ಪ್ರಮೊದ ರಾವನ್ನವರ,ಬಸವರಾಜ ಗಿಡ್ಡಾಳಿ,ಮಲ್ಲಿಕಾರ್ಜುನ ಮದಿಹಳ್ಳಿ,ಗೊವಿಂದ ಖಾನಗೌಡ್ರ ಸೇರಿದಂತೆ ಅನೇಕ ಸಹಕಾರಿಗಳು ಉಪಸ್ಥಿತರಿದ್ದರು.