ಬೆಂಗಳೂರು:
2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಗೊಂಡಿದೆ.

ಇಂದು ಪರೀಕ್ಷಾ ಮಂಡಳಿಯ ಜಾಲತಾಣದಲ್ಲಿ ಇದನ್ನು ಪ್ರಕಟಿಸಲಾಗಿದೆ. ವಾರ್ಷಿಕ ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿಗೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಡಿಸೆಂಬರ್ 1ರಿಂದ ಡಿ.15ರವರೆಗೆ 15 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ.

2024ರ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿ ಇಲ್ಲಿದೆ.

ಈಗ ಬಿಡುಗಡೆಯಾಗಿರುವ ವೇಳಾಪಟ್ಟಿಯ ಪ್ರಕಾರ ದ್ವಿತೀಯ ಪಿಯುಸಿ ಪರೀಕ್ಷೆಯು 2024ರ ಮಾರ್ಚ್ 2ರಿಂದ ಮಾರ್ಚ್ 22ರವರೆಗೆ ನಡೆಯಲಿದೆ. ಅದೇ ರೀತಿ ಎಸ್ಎಸ್ಎಲ್ ಸಿ ಪರೀಕ್ಷೆ ಮಾರ್ಚ್ 25ರಿಂದ ಎಪ್ರಿಲ್ 6ರವರೆಗೆ ನಡೆಯಲಿದೆ.

ದ್ವಿತೀಯ ಪಿಯುಸಿ ವೇಳಾಪಟ್ಟಿ

ಮಾರ್ಚ್ 2: ಕನ್ನಡ, ಅರೇಬಿಕ್

ಮಾರ್ಚ್ 4: ಇತಿಹಾಸ, ಭೌತಶಾಸ್ತ್ರ
ಮಾರ್ಚ್ 5: ಮಾಹಿತಿ ತಂತ್ರಜ್ಞಾನ, ರಿಟೈಲ್, ಅಟೋಮೊಬೈಲ್, ಹೆಲ್ತೇಕೇರ್, ಬ್ಯೂಟಿ ಆ್ಯಂಡ್ ವೆಲ್ನೆಸ್

ಮಾರ್ಚ್ 6: ಸಮಾಜಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈಯನ್ಸ್

ಮಾರ್ಚ್ 7: ಹಿಂದಿ

ಮಾರ್ಚ್ 9: ರಾಜ್ಯ ಶಾಸ್ತ್ರ, ಸಂಖ್ಯಾಶಾಸ್ತ್ರ

ಮಾರ್ಚ್ 11: ಇಂಗ್ಲೀಷ್

ಮಾರ್ಚ್ 12: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್

ಮಾರ್ಚ್ 13: ತರ್ಕ ಶಾಸ್ತ್ರ, ಬ್ಯುಸಿನೆಸ್ ಸ್ಟಡೀಸ್

ಮಾರ್ಚ್ 14: ಗಣಿತ, ಶಿಕ್ಷಣ ಶಾಸ್ತ್ರ

ಮಾರ್ಚ್ 16: ಭೌಗೋಳ ಶಾಸ್ತ್ರ, ಜೀವ ಶಾಸ್ತ್ರ

ಮಾರ್ಚ್ 18: ಹಿಂದೂಸ್ತಾನಿ ಸಂಗೀತ, ಸೈಕಾಲಜಿ, ಕೆಮೆಸ್ಟ್ರಿ, ಮೂಲ ಗಣಿತ

ಮಾರ್ಚ್ 20: ಐಚ್ಛಿಕ ಕನ್ನಡ, ಅಕೌಂಟನ್ಸಿ, ಜೀಯೋಲಾಜಿ, ಗೃಹ ವಿಜ್ಞಾನ

ಮಾರ್ಚ್ 22: ಅರ್ಥಶಾಸ್ತ್ರ

 

ಎಸ್ಎಸ್ಎಲ್ ಸಿ ಪರೀಕ್ಷೆ ವೇಳಾಪಟ್ಟಿ: 2024

ಮಾರ್ಚ್ 25: ಪ್ರಥಮ ಭಾಷೆ (ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್ (ಎನ್ ಸಿಇಆರ್ ಟಿ), ಸಂಸ್ಕೃತ.

ಮಾರ್ಚ್ 27: ಸಮಾಜ ವಿಜ್ಞಾನ

ಮಾರ್ಚ್ 30: ವಿಜ್ಞಾನ, ರಾಜ್ಯ ಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ/ಕರ್ನಾಟಕ ಸಂಗೀತ

ಎಪ್ರಿಲ್ 2: ಗಣಿತ, ಸಮಾಜ ಶಾಸ್ತ್ರ,

ಎಪ್ರಿಲ್ 3: ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ – IV

ಎಲಿಮೆಂಟ್ಸ್ ಆಫ್ ಮೆಕ್ಯಾನಿಕಲ್ ಆ್ಯಂಡ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್-2

ಎಲಿಮೆಂಟ್ಸ್ ಆಫ್ ಮೆಕ್ಯಾನಿಕಲ್ ಇಂಜಿನಿಯರಿಂಗ್- IV

ಇಂಜಿನಿಯರಿಂಗ್ ಗ್ರಾಫಿಕ್ಸ್ – 2

ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ – IV

ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್

ಪ್ರೊಗ್ರಾಮಿಂಗ್ ಇನ್ ANSI ‘C’

ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈಯನ್ಸ್

ಅರ್ಥಶಾಸ್ತ್ರ

ಎಪ್ರಿಲ್ 4: ತೃತೀಯ ಭಾಷೆ {ಹಿಂದಿ (ಎನ್ ಸಿಇಆರ್ ಟಿ), ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು}

ಎನ್ಎಸ್ ಕ್ಯೂಎಫ್ ಸಬ್ಜೆಕ್ಟ್ ( ಮಾಹಿತಿ ತಂತ್ರಜ್ಞಾನ, ರಿಟೇಲ್, ಅಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಆ್ಯಂಡ್ ವೆಲ್ ನೆಸ್, ಅ ಪರೆಲ್ಸ್ ಮೇಡ್ ಆಪ್ಸ್ & ಹೋಮ್ ಫರ್ನಿಶಿಂಗ್ ಎಲೆಕ್ಟ್ರಾನಿಕ್ಸ್ & ಹಾರ್ಡ್ ವೇರ್)

ಎಪ್ರಿಲ್ 6: ದ್ವಿತೀಯ ಭಾಷೆ (ಇಂಗ್ಲಿಷ್, ಕನ್ನಡ)