ಕೋಟ: ಎಸೆಸೆಲ್ಸಿ ಮರುಮೌಲ್ಯ ಮಾಪನದಲ್ಲಿ ಕೋಟ ವಿವೇಕ ಸಂಸ್ಥೆಯ ಆಂಗ್ಲ ಮಾಧ್ಯಮ ವಿಭಾಗದ ವಿದ್ಯಾರ್ಥಿನಿ ಮಣೂರು ನಿಧಿ ಎಂ.ಪೈ ಎರಡು ಹೆಚ್ಚುವರಿ ಅಂಕ ಗಳಿಸುವ ಮೂಲಕ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಈಕೆ ಕೋಟ ಆಯಿಲ್‌ಮಿಲ್‌ ಮಾಲಕರಾಗಿರುವ ಮಣೂರು ನಾರಾಯಣ ಪೈ ಹಾಗೂ ಲಕ್ಷೀ ಎನ್‌.ಪೈಯವರ ಪುತ್ರಿ.