
ಮಂಗಳೂರು: ದ.ಕ. ಜಿಲ್ಲಾ ಕುಡುಬಿ ಸಮಾಜ ಸೇವಾ ಸಂಘ ಕೊಂಪದವು, ಯುವಜನ ಮತ್ತು ಕ್ರೀಡಾ ವೇದಿಕೆ ಆಶ್ರಯದಲ್ಲಿ ಮಂಗಳೂರು ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ರಾಜ್ಯ ಮಟ್ಟದ ಕುಡುಬಿ ಬಾಂಧವರ ಪ್ರಥಮ ವರ್ಷದ ಮ್ಯಾಟ್ ಕಬಡ್ಡಿ ಪಂದ್ಯಾಟ ಫೆ.9ರಂದು ಬೆಳಗ್ಗೆ 8.30 ರಿಂದ ಮಿಜಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬಳಿ ನಡೆಯಲಿದೆ. ಸಂಜೆ 7 ಕ್ಕೆ ದ.ಕ. ಜಿಲ್ಲಾ ಕುಡುಬಿ ಸಮಾಜ ಸೇವಾ ಸಂಘ ಜಿಲ್ಲಾಧ್ಯಕ್ಷ ಕೃಷ್ಣ ಕೊಂಪದವು ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.
ಸ್ಪೀಕರ್ ಯು.ಟಿ. ಖಾದರ್, ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ಉಮಾನಾಥ ಕೋಟ್ಯಾನ್, ಡಾ.ವೈ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ರಾಜೇಶ್ ನ್ಯಾಕ್, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಮಂಜುನಾಥ ಭಂಡಾರಿ, ಕಿಶೋರ್ ಬೊಟ್ಯಾಡಿ, ಬಡಗ ಎಡಪದವು ಗ್ರಾಪಂ ಅಧ್ಯಕ್ಷ ಲತಾ ದಯಾನಂದ, ಗಣ್ಯರು ಭಾಗವಹಿಸುವರು.
ವಿವಿಧ ಕ್ಷೇತ್ರದ ಸಾಧಕರಾದ ಕಿರಣ್ ನೂಯಿ (ಸೈನಿಕ ಸೇವೆ), ರಾಜು ಗೌಡ ಅರೆಮಜಲು ಪಲ್ಕೆ (ಕೃಷಿ), ಪ್ರೇಮಾ ಹಳ್ಳಿಮನೆ ಪುತ್ತಿಗೆ (ಮನೆ ಮದ್ದು), ಶ್ರೀನಿವಾಸ ಗೌಡ ಅಶ್ವತ್ಥಪುರ (ಜಾನಪದ ಕ್ರೀಡೆ), ಶಂಕರ ಗೌಡ ಬಟ್ಟೆ (ಜಾನಪದ ಕಲೆ), ವಿಜಯ್ ನೀರ್ಕೆರೆ (ಭಜನೆ), ರಾಷ್ಟ್ರೀಯ ಮಟ್ಟದ ಲಾಂಗ್ ಜಂಪ್ ಕ್ರೀಡಾಪಟು ರಕ್ಷಿತಾ, ರಾಷ್ಟ್ರೀಯ ಮಟ್ಟದ ಫ್ಲೋರ್ ಬಾಲ್ ಕ್ರೀಡಾಪಟುಗಳಾದ ಅನುಷಾ, ಸಂಧ್ಯಾ, ಸತ್ಯೇಂದ್ರ, ಸುಮನಾ ಅವರನ್ನು ಸನ್ಮಾನಿಸಲಾಗುವುದು. ಸಂಘ ಸಂಸ್ಥೆಗಳ ಸಾಧನಾ ಪ್ರಶಸ್ತಿಯನ್ನು ಕೊಣಾಜೆ ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆಗೆ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.