Join The Telegram | Join The WhatsApp |
ಬೆಂಗಳೂರು-
ರಾಜ್ಯದ ಪೊಲೀಸರು ಒಂದು ತಿಂಗಳಲ್ಲಿ ಕಳೆದುಹೋದ 2,500 ಫೋನ್‌ಗಳನ್ನು ಹಿಂದಿರುಗಿಸುವಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಿಇಐಆರ್ ಮೂಲಕ ಕಳೆದ ಎರಡು ವಾರಗಳಲ್ಲಿ ಕದ್ದ ಅಥವಾ ಕಳೆದುಹೋದ ಕನಿಷ್ಠ 2,500 ಮೊಬೈಲ್ ಫೋನ್‌ಗಳನ್ನು ಅವುಗಳ ಮಾಲೀಕರಿಗೆ ಹಿಂತಿರುಗಿಸಲಾಗಿದೆ.
ರಾಜ್ಯದಲ್ಲಿ ಮೊಬೈಲ್ ಕಳ್ಳರ ಹಾವಳಿ ತಡೆಗೆ ಜಾರಿಗೆ ತಂದಿರುವ ಸೆಂಟ್ರಲ್ ಇಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್(CEIR) ಸೇವೆಯಡಿ ಒಂದೇ ತಿಂಗಳಲ್ಲಿ 2500 ಮೊಬೈಲ್ ಪತ್ತೆ ಮಾಡಲಾಗಿದೆ.
ಮೊಬೈಲ್ ಕಳವಾದರೆ ಕೂಡಲೇ www.ceir.gov.in ವೆಬ್‌ಸೈಟ್‌ನಲ್ಲಿ ಸಾರ್ವಜನಿಕರು ದೂರು ದಾಖಲಿಸಿ ಮೊಬೈಲ್ ಬ್ಲಾಕ್ ಮಾಡಿಸಬಹುದು. ಕಳವಾದ ಮೊಬೈಲ್‌ನಲ್ಲಿದ್ದ ಸಿಮ್ ಕಾರ್ಡ್ ಹೊಸದಾಗಿ ಪಡೆಯಬೇಕು. ಕಳವಾದ ಮೊಬೈಲ್ ಮಾಡೆಲ್, ಐಎಂಇಐ ನಂಬರ್, ಸಿಮ್ ನಂಬರ್ ನೋಂದಣಿ ಮಾಡಬೇಕು. ಅಲ್ಲದೆ, ಮೊಬೈಲ್‌ಗೆ ಬರುವ ಒಟಿಪಿ ನಮೂದು ಮಾಡಿದರೇ ಕೂಡಲೇ ಮೊಬೈಲ್ ಬ್ಲಾಕ್ ಆಗಲಿದೆ.
ಕಳುವಾದ ಮೊಬೈಲ್ ಪತ್ತೆಯಾದ ಕೂಡಲೇ ಸಿಇಐಆರ್‌ನಲ್ಲಿ ಮಾಹಿತಿ ಅಪ್‌ಡೇಟ್ ಆಗಲಿದೆ. ಆಗ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ರವಾನೆ ಮಾಡಿ ವಾರಸುದಾರರಿಗೆ ಅಧಿಕಾರಿಗಳು ಮರಳಿಸುತ್ತಾರೆ. ಹಾಗೆಯೇ ಲಾಕ್ ಆಗಿರುವ ಮೊಬೈಲನ್ನು ಮತ್ತೆ ಬಳಕೆಗೆ ಲಾಕ್ ಓಪನ್ ಮಾಡುವಂತೆ ವೆಬ್‌ಸೈಟ್‌ನಲ್ಲಿ ಪೊಲೀಸರಿಗೆ ವಾರಸುದಾರರು ಮನವಿ ಸಲ್ಲಿಸಿದರೆ ಅನ್‌ಲಾಕ್ ಆಗಲಿದೆ.
Join The Telegram | Join The WhatsApp |