ಬೆಂಗಳೂರು: ವಿದ್ಯಾರ್ಥಿವೇತನ ಶೀಘ್ರ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜು.12ರಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ಶಾಲಾ- ಕಾಲೇಜು ಆರಂಭವಾದರೂ ಸಾರಿಗೆ ಇಲಾಖೆ ವಿದ್ಯಾರ್ಥಿ ಗಳಿಗೆ ಬಸ್ ಪಾಸ್ ನೀಡಲು ವಿಳಂಬ ಮಾಡುತ್ತಿದೆ ಎಂದು ಎಬಿವಿಪಿ ಪ್ರಾಂತ ಸಹಕಾರ್ಯದರ್ಶಿ ನಿತಿನ್ ಹೇಳಿದ್ದಾರೆ.