ಬೆಳಗಾವಿ : ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಬಿ.ಎ. ಅಂತಿಮ ವರ್ಷದ ವಿದ್ಯಾರ್ಥಿಗಳು ‘ಕರ್ನಾಟಕ ಸಮಾಜ’ ವಿಷಯದ ಶಿಕ್ಷಣ ಉಪಕ್ರಮದ ಭಾಗವಾಗಿ ಕ್ಷೇತ್ರ ಅಧ್ಯಯನ ಮತ್ತು ವೀಕ್ಷಣೆಗಾಗಿ ಯಲ್ಲಾಪುರ, ಯಾಣ ಮತ್ತು ಗೋಕರ್ಣ ಸ್ಥಳಗಳಿಗೆ ಮಹಾವಿದ್ಯಾಲಯ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅಪ್ಪಣ್ಣ ಜಿರನಾಳ ಮತ್ತು ಉಪನ್ಯಾಸಕಿ ಡಾ. ಪ್ರೀತಿ ಪದಪ್ಪಗೋಳ ಅವರ ನೇತೃತ್ವದಲ್ಲಿ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.