ಬೆಳಗಾವಿ : ಕೆಎಲ್ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯ ಹಾಗೂ ಲಿಂಗರಾಜ ಮಹಾವಿದ್ಯಾಲಯ ಮತ್ತು ಆಂತರಿಕ ಗುಣಮಟ್ಟ ಕೋಶ, ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ, ಬೆಳಗಾವಿ ಸ್ವಪ್ನಾ ಬುಕ್ ಸ್ಟಾಲ್ ಸಹಯೋಗದಲ್ಲಿ ವಿವಿಧ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮಳಿಗೆಯನ್ನು ದಿನಾಂಕ 20/11/2024 ರಂದು ಬೆಳಿಗ್ಗೆ 10:30 ಕ್ಕೆ ಕಾರ್ಯಕ್ರಮ ಉದ್ಘಾಟಿಸಿಲಾಯಿತು.
ಲಿಂಗರಾಜ ಮಹಾವಿದ್ಯಾಲಯದ ಇಂಗ್ಲೀಷ್ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ. ಎಂ.ವಿ. ಬಾಗಿ ಮಾತನಾಡಿ, ಜಾಗತೀಕರಣದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಅಧ್ಯಯನ ಕಡಿಮೆ ಮಾಡುತ್ತಿದ್ದಾರೆ. ಗಣಕೀಕರಣ ಗ್ರಂಥಾಲಯದ ಸಾಕಷ್ಟು ಮೌಲಿಕವಾದ ಗ್ರಂಥಗಳು ಇವೆ. ವಿದ್ಯಾರ್ಥಿಗಳು ನಿರಂತರ ಅಧ್ಯಯನ ಮಾಡಬೇಕು. ಪಠ್ಯ ಪುಸ್ತಕದ ಜೊತೆಗೆ ವೈಚಾರಿಕ, ಆಧ್ಯಾತ್ಮಿಕ ಕೃತಿಗಳನ್ನು ಓದಬೇಕು. ಪುಸ್ತಕಗಳಿಂದ ಸಾಕಷ್ಟು ಜ್ಞಾನ ಕ್ಷಿತಿಜ ವಿಸ್ತರಿಸುತ್ತಿದೆ. ವಿವಿಧ ಪ್ರಕಾರದ ಗ್ರಂಥಗಳನ್ನ ಅಧ್ಯಯನ ಮಾಡುತ್ತಿದ್ದರೆ ಬರವಣಿಗೆಯ ಕೌಶಲ್ಯ ಕರಗತವಾಗುತ್ತದೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಆರ್ ಎಲ್ ಎಸ್ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಜ್ಯೋತಿ ಕವಳೇಕರ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಪುಸ್ತಕ ಪರಿಚಯ ಮಾಡಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ಮಾಡಿಕೊಂಡು ಸ್ವಾವಲಂಬನೆಯಾಗಿ ಜೀವನ ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.
ಅಂಬ್ರಿಣಿ ಕುಲಕರ್ಣಿ ಪ್ರಾರ್ಥಿಸಿದರು. ಪ್ರಿಯಾಂಕಾ ಕೆ ಸ್ವಾಗತಿಸಿದರು. ವಿನಾಯಕ ಸವಟಗಿ ಪರಿಚಯಿಸಿದರು. ದೀಪಾ ಬಾಳಿಕಾಯಿ ವಂದಿಸಿದರು. ಅಮಿಶಾ ಮತ್ತು ಸಾಗರ ನಿರೂಪಿಸಿದರು.
ಲಿಂಗರಾಜ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಚ್ . ಎಸ್. ಮೇಲಿನಮನಿ, ಲಿಂಗರಾಜ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯೆ ಗಿರಿಜಾ ಹಿರೇಮಠ, ಆರ್ ಎಲ್ ಎಸ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ವಿ. ಸಿ. ಕಾಮಗೋಳ, ಡಾ.ವಿನಯಕುಮಾರ, ಪ್ರೊ. ಎಸ್.ಬಿ. ತಾರದಾಳೆ ,ಗ್ರಂಥಪಾಲಕರಾದ ವಿನಾಯಕ ಸವಟಗಿ, ಪ್ರಿಯಾಂಕ ಕೆ, ಕಾಲೇಜಿನ ಎಲ್ಲ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.