ಬೆಂಗಳೂರು : ನಕಲಿ ದಸ್ತಾವೇಜುಗಳನ್ನು ನೋಂದಣಿ ಮಾಡುವವರಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶ ಕಲ್ಪಿಸಿರುವ ನೋಂದಣಿ (ಕರ್ನಾಟಕ ತಿದ್ದು 2) -2023 ಸಬ್ ರಿಜಿಸ್ಟ್ರಾರ್‌ಗಳು ನೋಂದಣಿ ಕಾರ್ಯ ವನ್ನು ಸ್ಥಗಿತಗೊಳಿಸಿದ್ದಾರೆ.

ನೋಂದಣಿ ಕಾಯ್ದೆ 1908 ರ
ನಿಯಮ 22(ಬಿ)ಗೆ ತಿದ್ದುಪಡಿ ತಂದು, ನೋಂದಣಿ (ಕರ್ನಾಟಕ ತಿದ್ದುಪಡಿ) ಅಧಿನಿಯಮ-2023 ರಾಜ್ಯ ಸರಕಾರವು ಅಧಿಸೂಚನೆ ಹೊರಡಿಸಿದೆ. ಇದನ್ನು ವಿರೋಧಿಸಿ ಸಬ್ ರಿಜಿಸ್ಟ್ರಾರ್‌ಗಳು ರಾಜ್ಯಾದ್ಯಂತ ಆಸ್ತಿ ದಾಖಲೆಗಳೂ ಸೇರಿ ದಂತೆ ಎಲ್ಲ ದಸ್ತಾವೇಜುಗಳ ನೋಂದಣಿ ಯನ್ನು ಸೋಮವಾರದಿಂದಲೇ ಸ್ಥಗಿತ ಗೊಳಿಸಿ ಮುಷ್ಕರ ಹೂಡಿದ್ದಾರೆ.

ಅ.19ರವರೆಗೆ ದಿನಾಂಕ, ಸಮಯ ಕಾಯ್ದಿರಿಸಿ ಮುದ್ರಾಂಕ ಶುಲ್ಕ ಪಾವತಿಸಿರು ವವರ ದಸ್ತಾವೇಜುಗಳನ್ನಷ್ಟೇ ಕೆಲ ಉಪ ನೋಂದಣಿ ಮಾಡಲಾಗಿದೆ. ನೋಂದಣಿ (ಕರ್ನಾಟಕ ತಿದ್ದುಪಡಿ) ಅಧಿನಿಯಮದ ಕುರಿತು ಕೇಂದ್ರ ಕಚೇರಿಯಿಂದ ಸೂಕ್ತ ನಿರ್ದೇಶನ ಬರುವವರೆಗೆ ದಸ್ತಾವೇಜುಗಳ ಪರಿಶೀಲನೆ, ನೋಂದಣಿಯನ್ನು ಅನಿರ್ದಿಷ್ಟಾವಧಿವರೆಗೆ ಸ್ಥಗಿತಗೊಳಿಸಲಾಗುತ್ತಿದೆ ಎಂದು ಉಪ ನೋಂದಣಾಧಿಕಾರಿಗಳ ಕಚೇರಿಗಳ ಮುಂಭಾಗ ಭಿತ್ತಿಪತ್ರಗಳನ್ನು ಅಂಟಿಸಲಾಗಿದೆ.