ಶಿರ್ವ: ಸೂಡ ಶ್ರೀ ಮಯೂರ ವಾಹನ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ 9ನೇ ವರ್ಷದ ತಿರುಗಾಟದ ಪ್ರಥಮ ಸೇವೆಯಾಟ ಸೂಡ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪ್ರಾಕ್ತನ ಆನುವಂಶಿಕ ಆಡಳಿತ ಮೊಕ್ತೇಸರ ದಿ.ಶಿರ್ವ ಕೋಡು ಡಾ. ಕರುಣಾಕರ ಹೆಗ್ಡೆಯವರ ಸಂಸ್ಮರಣೆಯೊಂದಿಗೆ ಡಿಸೆಂಬರ್ 14ರಂದು ಸೂಡ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ನಡೆಯಲಿದೆ. ಸಾಧಕರಿಗೆ ಸನ್ಮಾನ, ಪ್ರಶಸ್ತಿ ಪ್ರದಾನ ಹಾಗೂ ಶ್ರೀದೇವರ ಸನ್ನಿಧಿಯಲ್ಲಿ ಗೆಜ್ಜೆ ಸೇವೆಯೊಂದಿಗೆ ಪ್ರಥಮ ಸೇವೆ ಬಯಲಾಟ ಅಶ್ವಮೇಧ ಜರುಗಲಿದೆ ಎಂದು ಮೇಳದ ಸಂಚಾಲಕ ಮತ್ತು ಭಾಗವತ ಸೂಡ ಹರೀಶ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.