ನವದೆಹಲಿ: ಕಬ್ಬು ಬೆಳೆದ ರೈತರಿಗೆ ಬಾಕಿ ಪಾವತಿ ಉಳಿಸಿಕೊಂಡಿರುವ ರಾಜ್ಯಗಳ ಪೈಕಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಕೇಂದ್ರ ಆಹಾರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಲೋಕಸಭೆಯಲ್ಲಿ ಲಿಖಿತ ರೂಪದಲ್ಲಿ ಉತ್ತರಿಸಿದ ಅವರು, ದೇಶದಲ್ಲಿ ಒಟ್ಟು ₹3015 ಕೋಟಿ ಪಾವತಿ ಬಾಕಿ ಇದೆ. ಈ ಪೈಕಿ ಕರ್ನಾಟಕದಲ್ಲಿ ಅತಿ ಹೆಚ್ಚು 1,405 ಕೋಟಿ ಪಾವತಿ ಬಾಕಿ ಇದೆ. ಇದರ ನಂತರದಲ್ಲಿ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರಗಳು ಪಾವತಿ ಬಾಕಿ ಉಳಿಸಿಕೊಂಡಿವೆ ಎಂದರು. ಡಿ.13ರವರೆಗೆ 2024-25 ವರ್ಷದ ಸಕ್ಕರೆ ಸೀಸನ್‌ನ ಮೊದಲ 70 ದಿನದಲ್ಲಿ ₹8,126 ಕೋಟಿ ಪಾವತಿ ಮಾಡಲಾಗಿದೆ ಎಂದು ತಿಳಿಸಿದರು.