ಬೆಂಗಳೂರು:
ಪ್ರೆಸ್ ಇನ್‌ಫಾರ್ಮೆಶನ್ ಬ್ಯುರೊದ (PIB) ಫ್ಯಾಕ್ಟ್ ಚೆಕ್ ವಿಭಾಗ, ಸುಳ್ಳು ಸುದ್ದಿಗಳನ್ನು ಹರಡುವ 9 ಯುಟ್ಯೂಬ್ ಚಾನಲ್‌ಗಳ ಹೆಸರನ್ನು ಬಿಡುಗಡೆ ಮಾಡಿದೆ.
ಈ 9 ಯುಟ್ಯೂಬ್ ಚಾನಲ್‌ಗಳು 83 ಲಕ್ಷಕ್ಕೂ ಅಧಿಕ ಚಂದಾದಾರರನ್ನು ಹೊಂದಿದ್ದವು ಎಂದು ತಿಳಿಸಿದೆ. ಈ ವರದಿ ಆಧರಿಸಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ಚಾನಲ್‌ಗಳನ್ನು ಸ್ಥಗಿತಗೊಳಿಸಬಹುದು.
ಈ ಕುರಿತು ಪಿಐಬಿ ಫ್ಯಾಕ್ಟ್ ಚೆಕ್ ವಿಭಾಗ x ತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ.
Sarkari Yojana Official, Sansani Live, Bajrang Education, Aapke Guruji, BJ News, Ab Bolega Bharat, GVT News, Daily Study, Bharat Ekta News ಎಂಬ 9 ಯುಟ್ಯೂಬ್ ಚಾನಲ್‌ಗಳು ಸುಳ್ಳು ಸುದ್ದಿಗಳನ್ನು ಹರಡುತ್ತಿವೆ ಎಂದು ಆರೋಪಿಸಿದೆ.