ಮೂಡಲಗಿ( ಬೆಳಗಾವಿ ಜಿಲ್ಲೆ): ಬೇಸಿಗೆ ಹಿನ್ನಲೆ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ನೀರನ್ನು ಬೀಡುಗಡೆ ಮಾಡಿದ ಹಿನ್ನಲೆ ಶುಕ್ರವಾರದಂದು ತಾಲೂಕಿನ ಸುಣಧೋಳಿ-ಮೂಡಲಗಿಗೆ ಸಂಪರ್ಕ ಕಲ್ಪಿಸುವ ಸುಣಧೋಳಿ ಸೇತುವೆಯು ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ.
ಸುಣಧೋಳಿಯ ಬಳಿಯ ಘಟಪ್ರಭಾ ನದಿಯ ಸೇತುವೆಗೆ ಅಡ್ಡಲಾಗಿ ಗೇಟ್ಗಳನ್ನು ಹಾಕಿರುವುದರಿಂದ ಸೇತುವೆ ಮೇಲೆ ನೀರು ಹರಿದು ಬರುತ್ತಿದೆ. ಇದರಿಂದ ಸೇತುವೆ ಮೇಲಿನ ಸಂಚಾರ ಸ್ಥಗಿತವಾಗಿದೆ. ನದಿಯ ಎರಡು ಬದಿಯಲ್ಲಿ ಬ್ಯಾರಿಗೇಟ್ ಹಾಕಿ ಪೊಲೀಸ್ ಸಿಬ್ಬಂದಿಗಳನ್ನ ನಿಯೋಜನೆ ಮಾಡಲಾಗಿದೆ.
ಘಟಪ್ರಭಾ ನದಿಗೆ ಕುಡಿಯುವ ನೀರಿಗಾಗಿ ನೀರನ್ನು ಬೀಡಲಾಗಿದ್ದು, ಸುಣಧೋಳಿ ಸೇತುವೆ ಜಲಾವೃತಗೊಂಡ ಹಿನ್ನೆಲೆ ಮೂರು ದಿನಗಳ ವರೆಗೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ತಹಶೀಲ್ದಾರ್ ಬಿ ಎಸ್ ಕಡಕಬಾವಿ ತಿಳಿಸಿದ್ದಾರೆ.