Join The Telegram | Join The WhatsApp |
ದೆಹಲಿ :
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಐದು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದ ಕನ್ನಡಿಗ ಎಸ್. ಅಬ್ದುಲ್ ನಜೀರ್ ಬುಧವಾರ ನಿವೃತ್ತರಾಗಿದ್ದಾರೆ.
ಅಬ್ದುಲ್ ನಜೀರ್ ಮೂಡುಬಿದರೆ ಮೂಲದವರು. 2017 ರಿಂದ 2023 ರ ವರೆಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಹಾಗೂ ಅದಕ್ಕು ಮೊದಲು 2003 ರಿಂದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಅವರು ಕಾರ್ಯನಿರ್ವಹಿಸಿದ್ದರು. ರಾಮ ಮಂದಿರ ಪ್ರಕರಣ, ತ್ರಿವಳಿ ತಲಾಕ್, 500,1000 ನೋಟು ಅಪನಗದಿಕಾರದ ಸೇರಿದಂತೆ ಮಹತ್ವದ ತೀರ್ಪುಗಳನ್ನು ಅವರು ಪ್ರಕಟಿಸಿದ್ದಾರೆ.
ಅಬ್ದುಲ್ ನಜೀರ್ ಅವರು ಅಯೋಧ್ಯೆಯ ಜಮೀನು ವಿವಾದ ತೀರ್ಪು ಪ್ರಕಟಿಸಿದ್ದ ಪಂಚಪೀಠದ ಇವರು ನ್ಯಾಯಮೂರ್ತಿಗಳಲ್ಲಿ ಏಕೈಕ ಮುಸ್ಲಿಂ ನ್ಯಾಯಮೂರ್ತಿಯಾಗಿದ್ದರು. ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದರೆ ಸಮೀಪದ ಬೆಳುವಾಯಿಯ ಕಾನದವರು. ದಿ. ಫಕೀರ್ ಸಾಹೇಬ್ ಹಾಗೂ ದಿ.ಹಮೀದಾಬಿ ದಂಪತಿಯ ಪುತ್ರರಾಗಿರುವ ಅಬ್ದುಲ್ ನಜೀರ್ ಅವರಿಗೆ ಐವರು ಒಡಹುಟ್ಟಿದವರಿದ್ದಾರೆ. ಜನವರಿ 5, 1958 ರಲ್ಲಿ ಜನಿಸಿದ ಅಬ್ದುಲ್ ನಜೀರ್ ಬೆಳುವಾಯಿಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದರು. ನಂತರ ಮೂಡುಬಿದರೆ ಮಹಾವೀರ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದುಕೊಂಡಿದ್ದಾರೆ. ಮಂಗಳೂರಿನ ಪ್ರತಿಷ್ಠಿತ ಎಸ್‌ಡಿಎಂ ಕಾಲೇಜಿನಲ್ಲಿ ಕಾನೂನು ಶಿಕ್ಷಣ ಅಭ್ಯಾಸದ ನಂತರ 1983 ರಲ್ಲಿ ಬೆಂಗಳೂರಿನ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಅಭ್ಯಾಸ ಮಾಡತೊಡಗಿದರು. 2003 ರ ಮೇನಲ್ಲಿ ಕರ್ನಾಟಕ ಹೈಕೋರ್ಟ್ ಹೆಚ್ಚುವರಿ ನ್ಯಾಯಾಧೀಶರಾಗಿ, ನಂತರ
ಕಾಯಂ ನ್ಯಾಯಾಧೀಶರಾಗಿ ನೇಮಕಗೊಂಡರು. ಫೆಬ್ರವರಿ 2017ರಲ್ಲಿ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವಾಗಲೇ ನಜೀರ್ ರವರು ಭಾರತದ ಸುಪ್ರೀಂ ಕೋರ್ಟ್ ಗೆ ಪದೋನ್ನತಿ ಪಡೆದರು.
ಇಲ್ಲಿ ವಿಶೇಷ ಎಂದರೆ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗದೆ ಉನ್ನತೀಕರಿಸಲ್ಪಟ್ಟ ಮೂರನೇ ನ್ಯಾಯಾಧೀಶರಲ್ಲಿ ನಜೀರ್ ಒಬ್ಬರು. 2017ರಲ್ಲಿ ತ್ರಿವಳಿ ತಲಾಕ್ ಪ್ರಕರಣದಲ್ಲಿ ವಿಚಾರಣೆ ನಡೆಸಿದ ಬಹುಧರ್ಮಿಯ ಪೀಠದಲ್ಲಿ ಅಬ್ದುಲ್ ನಜೀರ್ ಏಕೈಕ ಮುಸ್ಲಿಂ ನ್ಯಾಯಾಧೀಶರಾಗಿದ್ದರು. 2019ರಲ್ಲಿ ಅಯೋಧ್ಯೆ ವಿವಾದದ ಐತಿಹಾಸಿಕ ತೀರ್ಪಿನಲ್ಲೂ ಅಬ್ದುಲ್ ನಜೀರ್
ಸುಪ್ರೀಂ ಕೋರ್ಟ್ ಪಂಚಪೀಠದ ಭಾಗವಾಗಿದ್ದರು. ಸಿಜೆಐ ರಂಜನ್ ಗೊಗೋಯಿ, ಜಸ್ಟೀಸ್ ಎಸ್.ಎ.ಬೋಬ್ಡೆ, ಜಸ್ಟೀಸ್ ಡಿ.ವೈ.ಚಂದ್ರಚೂಡ, ಜಸ್ಟೀಸ್ ಅಶೋಕ ಭೂಷಣ್, ಜಸ್ಟೀಸ್ ಅಬ್ದುಲ್ ನಸೀರ್ ಅವರನ್ನು ಒಳಗೊಂಡಿತ್ತು. ಇದರಲ್ಲಿ ಹಿಂದೂ ರಚನೆಯ ಅಸ್ತಿತ್ವದ ಬಗ್ಗೆ ಹೇಳಿಕೆ ನೀಡಿದ ಎಎಸ್ಐ ವರದಿಯನ್ನು ಎತ್ತಿ ಹಿಡಿದು ರಾಮಮಂದಿರ ಪರವಾಗಿ ತೀರ್ಪು ನೀಡಿದ್ದರು. ನಿವೃತ್ತಿ ಎರಡು ದಿನದ ಹಿಂದೆ ಅಂದರೆ ಜನವರಿ 2 ರಂದು ನಜೀರ್ ಅವರು ಭಾರತ ಸರ್ಕಾರ 2016ರಲ್ಲಿ ನೋಟು ಅಮಾನೀಕರಣಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಆಲಿಸಿ ತೀರ್ಪು ನೀಡಿದ್ದರು.
ಅಬ್ದುಲ್ ನಜೀರ್ ಅವರು ದೇಶದ ಅತ್ಯುನ್ನತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿದ್ದರು. ಅತ್ಯಂತ ಸರಳ ವ್ಯಕ್ತಿತ್ವ ಹೊಂದಿದ್ದ ಅವರು ಕರಾವಳಿಗೆ ಬಂದಾಗಲೆಲ್ಲ ಸಭೆ- ಸಮಾರಂಭದಲ್ಲಿ ಆಪ್ತವಾಗಿ ಕನ್ನಡ ಮತ್ತು ತುಳು ಭಾಷೆಯಲ್ಲಿ ಮಾತನಾಡುವುದು ವಿಶೇಷವಾಗಿತ್ತು. ತಿಂಗಳಿಗೊಮ್ಮೆ ಊರಿನ ಮನೆಗೆ ಭೇಟಿ ನೀಡುವ ಸಂಪ್ರದಾಯ ಹೊಂದಿದ್ದ ಅವರು ಊರ ಹಿರಿಯರು ಮತ್ತು ವಕೀಲರ ಜೊತೆ ಮೂಡುಬಿದರೆ ಅಭಿವೃದ್ಧಿ ಬಗ್ಗೆ ಚರ್ಚಿಸಿ ಮರಳುತ್ತಿದ್ದರು.
ಈಗಿನ ಸಿಜೆಐ ಚಂದ್ರಚೂಡ ಹಾಗೂ ಸಹೋದ್ಯೋಗಿಗಳು ನ್ಯಾಯಮೂರ್ತಿ ನಜೀರ್ ಅವರ ಬಗ್ಗೆ ಅತ್ಯುತ್ತಮ ಅಭಿಪ್ರಾಯ ಹೊಂದಿದ್ದರು.
ಚಂದ್ರಚೂಡ್ ಹೇಳುವಂತೆ, ನಜೀರ್ ಅವರು ಸರಿ ಮತ್ತು ತಪ್ಪುಗಳೆದುರು ತಟಸ್ಥರಾಗಿ ಇರುತ್ತಿರಲಿಲ್ಲ. ಸದಾ ಸರಿಯಾದ ವಿಷಯದ ಪರ ನಿಲ್ಲುತ್ತಿದ್ದರು. ಜೊತೆಯಾಗಿ ಕೆಲಸ ಮಾಡಿದ್ದು ಒಟ್ಟಿಗೆ ತೀರ್ಪು ನೀಡಿದ್ದೇವೆ.
ಅಡ್ವೋಕೇಟ್ ಪ್ರದೀಪ್ ರೈ ಅವರ ಅಭಿಪ್ರಾಯದಲ್ಲಿ ನ್ಯಾಯಮೂರ್ತಿ ನಜೀರ್ ಅವರಿಗೆ ಗಂಗಾ ಏಕಾದಶಿ ಯಾವಾಗ ಎಂದು ತಿಳಿದಿದೆ. ಉತ್ತಮ ಪಂಚಾಂಗ(ಹಿಂದೂ ಕ್ಯಾಲೆಂಡರ್) ಜ್ಞಾನವನ್ನು ಹೊಂದಿದ್ದರು.
ಎಸ್ ಸಿ ಬಿ ಐ ಅಧ್ಯಕ್ಷ ವಿಕಾಸ ಸಿಂಗ್ ಅವರು ಹೇಳುವಂತೆ ನ್ಯಾಯಮೂರ್ತಿ ನಜೀರ್ ಅವರ ನೇಮಕ ಕೊಲಿಜಿಯಂ ವ್ಯವಸ್ಥೆಯು ಸುಗಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ನಜೀರ್ ಯಾವುದೇ ಹಿನ್ನೆಲೆಯಿಂದ ಬಂದವರಲ್ಲ. ಮತ್ತು ಅಲ್ಪಸಂಖ್ಯಾತರು ಆಗಿದ್ದರು. ನ್ಯಾಯಾಲಯಕ್ಕೆ ಉತ್ತಮ ಜನರನ್ನು ತರಲು ವ್ಯವಸ್ಥೆ ಕಾರ್ಯ ನಿರ್ವಹಿಸುತ್ತಿದೆ ಎಂದು ಕೊಲಿಜಿಯಂ ತೋರಿಸುತ್ತದೆ.
ನ್ಯಾಯಮೂರ್ತಿ ನಜೀರ್ ಅಯೋಧ್ಯೆಯ ಪ್ರಕರಣದಲ್ಲಿ ಪ್ರತ್ಯೇಕ ಅಭಿಪ್ರಾಯ ನೀಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅವರು ನಿಜವಾಗಿಯೂ ಜಾತ್ಯಾತೀತ ನ್ಯಾಯಾಧೀಶರಾಗಿದ್ದರು.
Join The Telegram | Join The WhatsApp |