Join The Telegram | Join The WhatsApp |
ನವದೆಹಲಿ:
ಮೊರ್ಬಿ ಸೇತುವೆ ಕುಸಿತ ಘಟನೆಗೆ ಸಂಬಂಧಿಸಿದ ತನಿಖೆ ಮತ್ತು ಇತರ ಅಂಶಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುವಂತೆ ಸುಪ್ರೀಂ ಕೋರ್ಟ್ ಸೋಮವಾರ ಗುಜರಾತ್ ಹೈಕೋರ್ಟ್‌ಗೆ ಸೂಚಿಸಿದೆ.
ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠವು ಈಗಾಗಲೇ ಘಟನೆ ಬಗ್ಗೆ ಸ್ವಯಂಪ್ರೇರಿತವಾಗಿ ಟಿಪ್ಪಣಿ ತೆಗೆದುಕೊಂಡಿದೆ ಮತ್ತು ಹಲವಾರು ಆದೇಶ ಹೊರಡಿಸಿರುವುದರಿಂದ, ಸದ್ಯಕ್ಕೆ ಅರ್ಜಿಗಳ ವಿಚಾರಣೆ ನಡೆಸುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಪೀಠ ಹೇಳಿದೆ.
ಘಟನೆಯಲ್ಲಿ ತನ್ನ ಇಬ್ಬರು ಸಂಬಂಧಿಕರನ್ನು ಕಳೆದುಕೊಂಡ ಪಿಐಎಲ್ ಅರ್ಜಿದಾರ ಮತ್ತು ಮತ್ತೊಬ್ಬ ಕಕ್ಷಿದಾರನಿಗೆ ಸ್ವತಂತ್ರ ತನಿಖೆ ಮತ್ತು ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡವರಿಗೆ ಗೌರವಯುತ ಪರಿಹಾರವನ್ನು ನೀಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಪೀಠ ಅನುಮತಿ ನೀಡಿತು.
ಅ.30 ರಂದು ಮೊರ್ಬಿಯ ಮಚ್ಚು ನದಿಯ ಮೇಲಿನ ಬ್ರಿಟಿಷ್ ಕಾಲದ ಸೇತುವೆ ಕುಸಿದು 47 ಮಕ್ಕಳು ಸೇರಿದಂತೆ 140 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.
Join The Telegram | Join The WhatsApp |