Join The Telegram | Join The WhatsApp |
ರಾಜ್ ಕೋಟ್ :
ವಿಶ್ವದ ನಂಬರ್ ಒನ್ ಕ್ರಿಕೆಟಿಗ ಭಾರತದ ಸೂರ್ಯ ಕುಮಾರ್ ಯಾದವ್ ಭರ್ಜರಿ ಶತಕ ಬಾರಿಸಿದ್ದಾರೆ. ಶ್ರೀಲಂಕಾ ವಿರುದ್ಧ ಟಿ20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಅವರು ಇಂದು 9 ಸಿಕ್ಸರ್ ಬಾರಿಸಿದ್ದಾರೆ. ಆಲ್ರೌಂಡರ್ ಆಕ್ಷರ್ ಪಟೇಲ್ ಇಂದು ಸಹ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಅವರು ನಾಲ್ಕು ಬೌಂಡರಿ ನೆರವಿನಿಂದ 21 ರನ್ ಗಳಿಸಿದ್ದಾರೆ. ಶುಭಮನ್ ಗಿಲ್ 46 ರನ್, ರಾಹುಲ್ ತ್ರಿಪಾಠಿ 35 ರನ್ ಗಳಿಸಿದ್ದಾರೆ.
ಭಾರತ ಇಂದು 20 ಓವರ್ ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 229 ರನ್ ಗಳಿಸಿದೆ.ಅಮೋಘ ಫಾರ್ಮಿನಲ್ಲಿರುವ ಸೂರ್ಯ ಕುಮಾರ್ ಯಾದವ್ ಅವರು ಟಿ20 ಕ್ರಿಕೆಟ್ ಪಂದ್ಯದಲ್ಲಿ ಮೂರನೇ ಶತಕ ಬಾರಿಸಿ ಸಾಧನೆ ಮೆರೆದಿದ್ದಾರೆ.
Join The Telegram | Join The WhatsApp |