Join The Telegram | Join The WhatsApp |
ಮೌಂಟ್ ಮೌಂಗನುಯಿ-
ಭಾರತ ತಂಡವು 2022 ರ T20 ವಿಶ್ವಕಪ್ ಗೆಲ್ಲಲು ವಿಫಲವಾಗಿ ಸೆಮಿ-ಫೈನಲ್‌ನಲ್ಲಿ ಪಂದ್ಯಾವಳಿಯಿಂದ ಹೊರಬಿದ್ದ ನಂತರ, ಅವರು T20I ಸರಣಿಗಾಗಿ ನ್ಯೂಜಿಲೆಂಡ್ ವಿರುದ್ಧದ ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಮ್ ಇಂಡಿಯಾ ಇಂದು ನಡೆದ 2ನೇ ಟಿ20 ಮೌಂಟ್ ಮೌಂಗನುಯಿಯ ಬೇ ಓವಲ್‌ನಲ್ಲಿ ಸೂರ್ಯಕುಮಾರ್ ಯಾದವ್ ಅಬ್ಬರದ ಆಟಕ್ಕೆ ನ್ಯೂಜಿಲೆಂಡ್ ಶರಣಾಗಿದೆ. 192 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ನ್ಯೂಜಿಲೆಂಡ್ 18.5 ಓವರ್ ಗಳಲ್ಲಿ126 ರನ್ ಗಳಿಗೆ ಆಲೌಟ್ ಆಗುವ ಮೂಲಕ 65 ರನ್‌ಗಳ ಸೋಲನುಭವಿಸಿದೆ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಸೂರ್ಯಕುಮಾರ್ ಯಾದವ್ ಅದ್ಭುತ ಶತಕದ ನೆರವಿನಿಂದ 191 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.ಅಂತಿಮವಾಗಿ 51 ಎಸೆತಗಳಲ್ಲಿ 11 ಬೌಂಡರಿ ಮತ್ತು 7 ಭರ್ಜರಿ ಸಿಕ್ಸರ್ ನೆರವಿನಿಂದ ಅಜೇಯ 111 ರನ್ ಗಳಿಸಿದರು. ರೋಹಿತ್ ಶರ್ಮಾ ನಂತರ ಒಂದೇ ವರ್ಷದಲ್ಲಿ ಎರಡು ಟಿ20 ಶತಕ ಸಿಡಿಸಿದ ಆಟಗಾರ ಎನಿಸಿಕೊಂಡರು.
ಈ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್‌ಗೆ ಭುವನೇಶ್ವರ್ ಕುಮಾರ್ ಮೊದಲ ಓವರ್ ನಲ್ಲೇ ಆಘಾತ ನೀಡಿದರು. ಸ್ಫೋಟಕ ಬ್ಯಾಟರ್ ಫಿನ್ ಅಲೆನ್‌ರಲ್ಲಿ ಮೊದಲನೇ ಓವರ್ ನಲ್ಲಿ ಔಟ್ ಮಾಡುವ ಮೂಲಕ ನ್ಯೂಜಿಲೆಂಡ್ ಮೇಲೆ ಒತ್ತಡ ಹೇರಿತು.
ಭಾರತೀಯ ಬೌಲರ್ ಗಳು ನ್ಯೂಜಿಲೆಂಡ್ ಬ್ಯಾಟರ್ ಗಳಿಗೆ ಹೆಚ್ಚಿನ ರನ್ ಗಳಿಸಲು ಅವಕಾಶ ನೀಡಲೇ ಇಲ್ಲ. ವೇಗಿಗಳು ಆರಂಭದಲ್ಲಿ ವಿಕೆಟ್ ಪಡೆದರೆ, ಮಧ್ಯಮ ಓವರ್ ಗಳಲ್ಲಿ ಸ್ಪಿನ್ನರ್ ಗಳು ಪ್ರಾಬಲ್ಯ ಸಾಧಿಸಿದರು. ದೀಪಕ್ ಹೂಡಾ 4 ವಿಕೆಟ್ ಪಡೆದು ಮಿಂಚಿದರು.
ಮುಂದಿನ ಪಂದ್ಯ- 22 ನವೆಂಬರ್
Join The Telegram | Join The WhatsApp |