ಮಂಗಳೂರು : ಭಾರತೀಯ ಕ್ರಿಕೆಟ್ ತಂಡದ ಶ್ರೇಷ್ಠ ಆಟಗಾರ ಸೂರ್ಯ ಕುಮಾರ್ ಯಾದವ್ ಹಾಗೂ ಅವರ ಪತ್ನಿ ದೇವಿಕಾ ಶೆಟ್ಟಿ ಮಂಗಳೂರಿಗೆ ಆಗಮಿಸಿ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಸೂರ್ಯಕುಮಾರ್ ಯಾದವ್ ಅವರ ಪತ್ನಿ ದೇವಿಕಾ ಶೆಟ್ಟಿ ಕರಾವಳಿ ಮೂಲದವರು. ಚೆನ್ನಾಗಿ ತುಳು ಮಾತನಾಡುತ್ತಾರೆ. ಕಳೆದ ವರ್ಷ ಶ್ರೀಲಂಕಾ ವಿರುದ್ಧ ಸೂರ್ಯ ಕುಮಾರ್ ಸ್ಫೋಟಕ ಆಟಕ್ಕೆ ಕೆ. ಎಲ್.ರಾಹುಲ್ ಅವರು ಬಾರಿ ಎಡ್ಡೆ ಗೊಬ್ಬಿಯ ಸೂರ್ಯ(ತುಂಬಾ ಚೆನ್ನಾಗಿ ಆಟವಾಡಿದೆ ಸೂರ್ಯ) ಎಂದು ಸಾಮಾಜಿಕ ಜಾಲತಾಣದ ಮೂಲಕ ತುಳುವಿನಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದರು. ಈ ಪೋಸ್ಟಿಗೆ ಸೂರ್ಯಕುಮಾರ್ ಅವರ ಪತ್ನಿ ದೇವಿಕಾ ಅವರು ಚೂರ್ ತುಳು ಕಲ್ಪಾವೊಡು ಅರೆಗ್ ನನ( ಅವರಿಗೆ ಇನ್ನೂ ಸ್ವಲ್ಪ ತುಳು ಕಲಿಸಬೇಕು )ಎಂದು ಪ್ರತಿಕ್ರಿಯಿಸಿದ್ದರು. ಸೂರ್ಯ ಕುಮಾರ್ ಮಗಳು ತುಳುವಿನಲ್ಲಿ ಮಾತನಾಡುವ ವಿಡಿಯೋ ಸಹ ವೈರಲ್ ಆಗಿತ್ತು.