ಬೆಳಗಾವಿ: ಜಿಲ್ಲೆಯಲ್ಲಿ ಅಂತ್ಯೋಂದಯ ಮತ್ತು ಆದ್ಯತಾ ಪಡಿತರ ಚೀಟಿಗಳು ಸೇರಿ ಒಟ್ಟು ೧೧,೧೧೭ ಹಾಗೂ ಆದ್ಯತೇತರ ಪಡಿತರ ಚೀಟಿಗಳು ೧,೪೨೧ ಹೀಗೆ ಒಟ್ಟು ೧೨,೫೩೮ ಮೃತ ಫಲಾನುಭವಿಗಳಿದ್ದು, ಅವುಗಳ ವಿವರವನ್ನು ಕುಟುಂಬ ದತ್ತಾಂಶದಿಂದ ಪಡೆದು ಸದರಿ ಫಲಾನುಭವಿಗಳನ್ನು ವಾಸ್ತವಿಕತೆಯನ್ನು ಪರಿಶೀಲಿಸಿ ಇಲಾಖೆಯ ದತ್ತಾಂಶದಿಂದ ತೆಗೆದು ಹಾಕಿ ಪ್ರಗತಿ ಸಾಧಿಸಲಾಗಿದೆ.

ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದಂತೆ ಅಂತ್ಯೋಂದಯ ೫೫೭, ಆದ್ಯತಾ ಪಡಿತರ ಚೀಟಿಗಳು ೧೯೪೧೨ ಒಟ್ಟು ೧೯,೯೬೯ ಪಡಿತರ ಚೀಟಿದಾರರು ಕಳೆದ ೬ ತಿಂಗಳು (ನವೆಂಬರ್-೨೦೨೩) ರಿಂದ (ಏಪ್ರೀಲ್-೨೦೨೪) ವರೆಗೆ ಪಡಿತರವನ್ನು ಇಲಾಖೆಯ ನ್ಯಾಯ ಬೆಲೆ ಅಂಗಡಿಗಳಿಂದ ಪಡೆಯದೇ ಇದ್ದುದರಿಂದ ದಿನಾಂಕ. ೨೯-೦೭-೨೦೨೪ ರಂದು ಸರ್ಕಾರದ ಅಪರ ಕಾರ್ಯದರ್ಶಿ, ಹಣಕಾಸು ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ನಿರ್ಣಯಿಸಿದಂತೆ ಇಲಾಖೆಯ ದತ್ತಾಂಶದಿಂದ ಸದರಿ ಪಡಿತರ ಚೀಟಿಗಳ್ನು ಅಮಾನತ್ತುಗೊಳಿಸಲಾಗಿರುತ್ತದೆ.
ವಿವಿಧ ಇಲಾಖೆಯಲ್ಲಿ ಸರ್ಕಾರಿ ನೌಕರರು ಹಾಗೂ ಅನರ್ಹರು ಹೊಂದಿರುವ ಒಟ್ಟು ೪೫,೮೦೪ ಆದ್ಯತಾ ಪಡಿತರ ಚೀಟಿಗಳು ಆದ್ಯತೇತರ ಪಡಿತರ ಚೀಟಿಗಳಾಗಿ ಪರಿವರ್ತಿಸುವುದರೊಂದಿಗೆ ಸದರಿ ನೌಕರರಿಂದ, ಅನರ್ಹ ಪಡಿತರ ಚೀಟಿದಾರರಿಂದ ಸರ್ಕಾರದ ಲೆಕ್ಕಶೀರ್ಷಿಕೆಗೆ ಒಟ್ಟು ರೂ. ೧,೮೮,೭೫,೯೪೬ ಹಣವನ್ನು ದಂಡ ಭರಣಾ ಮಾಡಸಲಾಗಿದೆ. ಮುಂದುವರೆದು ಪ್ರಸ್ತುತ ಸರ್ಕಾರಿ ನೌಕರರು ಹಾಗೂ ಅನರ್ಹರು ಆದ್ಯತಾ ಪಡಿತರ ಚೀಟಿ ಹೊಂದಿದ್ದಲ್ಲಿ ದಾಖಲಾತಿಗಳೊಂದಿಗೆ ಆಯಾ ತಹಶೀಲ್ದಾರ ಕಚೇರಿಗೆ ಒಪ್ಪಿಸಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.