ಬೆಳಗಾವಿ: ಅನುಮಾನಾಸ್ಪದವಾಗಿ 17 ವರ್ಷದ ಗರ್ಭಿಣಿ ಮೃತಪಟ್ಟಿರುವ ಘಟನೆ ಹಿರೇಬಾಗೇವಾಡಿಯಲ್ಲಿ ನಡೆದಿದೆ.
ಪತಿಯ ಮನೆಯವರೇ ಮಗಳನ್ನು ಕೊಲೆ ಮಾಡಿದ್ದಾರೆಂದು ಯುವತಿ ಪೋಷಕರು ಆರೋಪಿಸಿದ್ದಾರೆ.

ಹೀನಾ ಸಾಹೀಲ್ ಬಾಗವಾನ್‌ (17) ಮೃತ ಯುವತಿ. ಪತಿ ಸಾಹೀಲ್‌ ಕುತುಬುದ್ದೀನ್ ಬಾಗವಾನ್‌ , ಫರೀದಾ ಕುತುಬುದ್ದಿನ ಬಾಗವಾನ್‌, ಕುತುಬುದ್ದಿನ ಬಾಗವಾನ್‌ , ಸನ್ಮಾನ ಕುತುಬುದ್ದಿನ್ ಬಾಗವಾನ್‌, ಅಬ್ಬಾಸ ಅಬ್ದುಹಮೀದ ಡೋಣಿ ವಿರುದ್ಧ ಯುವತಿಯ ಪೋಷಕರು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಳೆದ ವರ್ಷ ಹೀನಾಳನ್ನು ಬಲವಂತವಾಗಿ ಮದುವೆ ಮಾಡಿಕೊಂಡಿದ್ದ. ಮದುವೆ ಬಳಿಕ, ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಮಗಳು ಗರ್ಭಿಣಿಯಾಗುತ್ತಿದಂತೆ ಪತಿಯ ಮನೆಯವರು ಮಗಳಿಗೆ ಚಿತ್ರಹಿಂಸೆ ನೀಡಿ, ನಿನಗೆ ಮನೆ ಕೆಲಸ ಬರುವುದಿಲ್ಲ ಎಂದು ಬಲಿ ಪಡೆದಿದ್ದಾರೆ ಎಂದು ಪೋಷಕರು ದೂರು ಸಲ್ಲಿಸಿದ್ದಾರೆ. ಮೃತ ಯುವತಿ ತಂದೆ-ತಾಯಿ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನಮ್ಮ ಮಗಳ ಸಾವಿಗೆ ನ್ಯಾಯ ಸಿಗಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ. ಹಿರೇಬಾಗೇವಾಡಿ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಸ್ಥಳಕ್ಕೆ ತಹಶೀಲ್ದಾರ ಸಿದ್ದರಾಯ ಬೋಸಗಿ, ಹಿರೇಬಾಗೇವಾಡಿ ಪೊಲೀಸರುಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಕೊಂಡಿದ್ದಾರೆ.