ಬೆಳಗಾವಿ :
ತೆರಿಗೆ ವಂಚಿಸಿ ಸರಕು ಸಾಗಿಸುತ್ತಿದ್ದ ಲಾರಿಯನ್ನು ಇಲ್ಲಿಯ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ತೆರಿಗೆ ಕಟ್ಟದೆ ಅಹಮದಾಬಾದ್ ನಿಂದ ಲಾರಿಯಲ್ಲಿ ಪಂಪ್ ಸೆಟ್ ಮೋಟಾರ್ ಸಾಗಾಟ ಮಾಡಲಾಗುತ್ತಿತ್ತು. ಬೆಳಗಾವಿ ಹೊರವಲಯದ ಇಂಡಸ್ಟ್ರಿಯಲ್ ಏರಿಯ ಬಳಿ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ. ನಿರಂಜನ್ ರೋಡ್ ಲೈನ್ಸ್ ಎಂಬ ಹುಬ್ಬಳ್ಳಿ ಮೂಲದವರಿಗೆ ಸೇರಿದ ಈ ಲಾರಿಯಲ್ಲಿ 8 ಲಕ್ಷ 61 ಸಾವಿರ ಮೌಲ್ಯದ ವಸ್ತುಗಳಿಗೆ ಯಾವುದೇ ದಾಖಲೆಯಿಲ್ಲದೇ ಇರುವುದು ಪತ್ತೆಯಾಗಿದೆ.

ಲಾರಿ ಮತ್ತು ಮೋಟರ್ ಪಂಪ್ ಸೆಟ್ ಜಪ್ತಿ ಮಾಡಿಕೊಂಡ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.