ಅಮರಾವತಿ: ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ 98-120 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ ಎಂದು ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಭವಿಷ್ಯ ನುಡಿದಿದೆ.

ಆಡಳಿತಾರೂಢ ವೈಎಸ್ಸಾ‌ರ್ ಕಾಂಗ್ರೆಸ್ 55 ರಿಂದ 77 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಟಿಡಿಪಿ 78 ರಿಂದ 96 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಟಿಡಿಪಿ ಮಿತ್ರ ಪಕ್ಷ ಜನಸೇನಾ 16-18, ಬಿಜೆಪಿ 4-6 ಸ್ಥಾನ ಗಳಿಸಬಹುದು. ವಿಪಕ್ಷ ಕಾಂಗ್ರೆಸ್‌ಗೆ 0-2 ಸ್ಥಾನ ಸಿಗಲಿವೆ ಎಂದು ಹೇಳಿದೆ.