Join The Telegram | Join The WhatsApp |
ಅಲ್ ಖೋರ್, ಕತಾರ್-
ಪ್ರತಿಷ್ಠಿತ 22 ನೇ FIFA- ಫಿಪಾ ಪುಟ್ಬಾಲ್ ವಿಶ್ವಕಪ್ ಅದ್ದೂರಿಯಾಗಿ ಆರಂಭಗೊಂಡಿದೆ. ಕ್ರೀಡಾಂಗಣವನ್ನು ಮೊಬೈಲ್ ಫೋನ್ ಟಾರ್ಚ್ ಹಿಡಿದು ಬೆಳಗಿಸಲಾಗಿದ್ದು, ದೋಹಾ ಸಮೀಪದ ಅಲ್ಬೇತ್ ಕ್ರೀಡಾಂಗಣದಲ್ಲಿ ವಿಶ್ವಕಪ್‌ನ ಉದ್ಘಾಟನಾ ಸಮಾರಂಭ ನಡೆಯಿತು. ಆಮೆರಿಕಾದ ನಟ ಮೋರ್ಗನ್ ಫ್ರೀಮನ್ ವಿಶ್ವಕಪ್‌ನ ಉದ್ಘಾಟನಾ ಸಮಾರಂಭವನ್ನು ನಡೆಸಿಕೊಟ್ಟರು.
ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆ ಎನಿಸಿಕೊಂಡಿರುವ ಫಿಪಾ ವಿಶ್ವಕಪ್ ಫುಟ್ಬಾಲ್ ವು 28 ದಿನಗಳ ಕಾಲ ಫುಟ್ಬಾಲ್ ಜ್ವರ ಇಡೀ ಜಗತ್ತನ್ನು ಕಾಡಲಿದೆ. ಎಂಟು ಕ್ರೀಡಾಂಗಣಗಳಲ್ಲಿ 64 ಪಂದ್ಯಗಳು ನಡೆಯಲಿವೆ. ಈ ಬಾರಿ ಫಿಫಾ ವಿಶ್ವಕಪ್ ಅನ್ನು 500 ಕೋಟಿ ಜನ ವೀಕ್ಷಿಸಲಿದ್ದಾರೆ ಎಂದು ಫಿಫಾ ಅಧ್ಯಕ್ಷ ಗಿಯಾನಿ ಇನ್‌ಫಾಂಟಿನೊ ಅಂದಾಜು ಮಾಡಿದ್ದಾರೆ.
ಅರಬ್ ದೇಶದಲ್ಲಿ ಮೊದಲ ಬಾರಿಗೆ ಫಿಫಾ ವಿಶ್ವಕಪ್ ಆಯೋಜಿಸಲಾಗಿದ್ದು, ಇದು ಇತಿಹಾಸದಲ್ಲೇ ಅತ್ಯಂತ ದುಬಾರಿ ವಿಶ್ವಕಪ್ ಆಗಿದೆ.
ಉದ್ಘಾಟನಾ ಸಮಾರಂಭದಲ್ಲಿ ವಿಶ್ವಕಪ್‌ನಲ್ಲಿ ಭಾಗವಹಿಸುವ 32 ದೇಶಗಳ ಧ್ವಜಗಳೊಂದಿಗೆ ವಿಶೇಷ ಪ್ರದರ್ಶನ ನಡೆಯಿತು.ಕತಾರ್‌ನ ರಾಷ್ಟ್ರೀಯ ದಿನಾಚರಣೆಯೊಂದಿಗೆ 18 ಡಿಸೆಂಬರ್ 2022 ರಂದು ಫೈನಲ್ ನಡೆಯಲಿದೆ.
ಮೊದಲ ಪಂದ್ಯದಲ್ಲಿ ಈಕ್ವೆಡಾರ್ ಗೆ ಗೆಲುವು-
ಅನುಭವಿ ಸ್ಟ್ರೈಕರ್ ಎನ್ನರ್ ವೆಲೆನ್ಸಿಯಾ ಅವರ ಎರಡು ಗೋಲುಗಳ ನೆರವಿನಿಂದ ಈಕ್ವೆಡಾರ್ ಭಾನುವಾರ ನಡೆದ ವಿಶ್ವಕಪ್ ಚೊಚ್ಚಲ ಕತಾರ್ ವಿರುದ್ಧ 2-0 ಗೋಲುಗಳಿಂದ ಗೆಲುವು ಪಡೆಯಿತು.
Join The Telegram | Join The WhatsApp |