Join The Telegram | Join The WhatsApp |
ಮೌಂಟ್ ಮೌಂಗನ್ಯುಯಿ-
ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಇಂದು ಎರಡನೇ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಮೌಂಟ್ ಮೌಂಗನ್ಯುಯಿಯ ಬೇ ಓವಲ್ ಮೈದಾನವು ಚುಟುಕು ಪಂದ್ಯಕ್ಕೆ ಸಾಕ್ಷಿಯಾಗಲಿದ್ದು, ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚಿದೆ.
ವೆಲ್ಲಿಂಗ್ಟನ್‌ನಲ್ಲಿ ನಡೆಯಬೇಕಿದ್ದ ಮೊದಲ ಟಿ20 ಪಂದ್ಯವು ಒಂದು ಎಸೆತವನ್ನೂ ಕಾಣದೆ ಮಳೆಯಿಂದಾಗಿ ರದ್ದಾಯಿತು. ಇದು ಎರಡನೇ ಟಿ20 ಪಂದ್ಯವೂ ಸಹ ಇದ್ರಿಂದ ಹೊರತಾಗಿಲ್ಲ. ಮೌಂಟ್ ಮೌಂಗನ್ಯುಯಿಯಲ್ಲಿ ಮಳೆಯ ಭೀತಿ ಎದುರಾಗಿದ್ದು, ಪಂದ್ಯವು ಮಳೆಯಿಂದ ರದ್ದಾಗಲಿರುವ ಸಾಧ್ಯತೆ ಹೆಚ್ಚಿದೆ.
ಪಂದ್ಯದ ವೇಳೆಯಲ್ಲಿ ಶೇಕಡಾ 64ರಷ್ಟು ಮಳೆ ಬರುವ ಸಾಧ್ಯತೆಯಿದ್ದು, ಇಲ್ಲಿನ ವಾತಾವರಣವು 14 ಡಿಗ್ರಿ ಸೆಲ್ಸಿಯಸ್‌ನಷ್ಟು ಇರಲಿದೆ ಎನ್ನಲಾಗಿದೆ. ಇನ್ನು ಶೇಕಡಾ 83ರಷ್ಟು ಹ್ಯುಮಿಡಿಟಿ ಇರಲಿದ್ದು, ಗಂಟೆಗೆ 13/km ವೇಗದಲ್ಲಿ ಗಾಳಿ ಬೀಸಲಿದೆ
ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 12 ಗಂಟೆಗೆ ನಿಗದಿಯಾಗಿದೆ.
Join The Telegram | Join The WhatsApp |