ಬಂಟ್ವಾಳ : ತಾಲೂಕಿನ ಕುರಿಯಾಳ ಸಮೀಪದ ಇರಾಕೋಡಿ ಎಂಬಲ್ಲಿ ಮಂಗಳವಾರ ಯುವಕನೊಬ್ಬನ ಹತ್ಯೆ ಮಾಡಲಾಗಿದೆ.

ಕೊಳತ್ತಮಜಲು ನಿವಾಸಿ ರಹೀಂ (34) ಎಂಬಾತ ಹತ್ಯೆಯಾದ ವ್ಯಕ್ತಿ. ಆತ ಇರಾಕೋಡಿಯಲ್ಲಿ ಪಿಕಪ್ ವಾಹನದಿಂದ ಮರಳನ್ನು ಇಳಿಸುವ ಸಂದರ್ಭದಲ್ಲಿ, ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ತಲವಾರಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ದಾಳಿಯ ಸಂದರ್ಭದಲ್ಲಿ ರಹೀಂ ಜೊತೆ ಶಾಫಿ ಎಂಬಾತನೂ ಸ್ಥಳದಲ್ಲಿದ್ದು, ಆತನ ಮೇಲೂ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಆತನ ಕೈಗೆ ಏಟಾಗಿದೆ ಎಂದು ಗೊತ್ತಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್ ಎನ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ದಾಳಿ ನಡೆದಿದ್ದು ನಿಜ. ಈ ಕುರಿತ ವಿವರಗಳನ್ನು ನಂತರ ಹಂಚಿಕೊಳ್ಳಲಿದ್ದೇವೆ ಎಂದು ಯತೀಶ್ ಎನ್. ತಿಳಿಸಿದರು.

ಕೊಳತ್ತಮಜಲು ನಿವಾಸಿ ರಹೀಂ ವಿವಾಹಿತನಾಗಿದ್ದು, ಇಬ್ಬರು ಮಕ್ಕಳಿದ್ದಾರೆ.