ಅದ್ಯಪಾಡಿ : ಅದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಆರಂಭವಾಗಿದೆ. ಮಾರ್ಚ್ 23 ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.

ಮಾರ್ಜಲ ಮಂಥನ
ಶ್ರೀ ಆದಿನಾಥೇಶ್ವರಸ್ವಾಮಿ ದೇವಸ್ಥಾನ, ಆದ್ಯಪಾಡಿ, ದಕ್ಷಿಣ ಕನ್ನಡ‌ ಇತಿಹಾಸ ಮತ್ತು ಮಹಿಮೆ:

ಕರ್ನಾಟಕದ ಪಡುವಣ ಕಡಲ ತೀರದಲ್ಲಿ ಸಸ್ಯ ಸಂಪತ್ತಿನಿಂದ ಮೆರೆಯುವ ದಕ್ಷಿಣ ಕನ್ನಡ ತೌಳ ರಾಜ್ಯ ಈ ತುಳುನಾಡು, ಆಸ್ತಿಕ ಜನಗಳು ಕೂಡಿ ಬದುಕಿ ಬಾಳುವ ನಾಡು, ದೇವರು, ದೈವಗಳು, ಗರಡಿಗಳು ತುಂಬಿರುವ ಬೀಡು, ದೇವಾಲಯ, ಭೂತಸ್ಥಾನ, ನಾಗಬನಗಳು ಕಂಗೊಳಿಸುವ ಚೆಂಗೂಡು, ಇಂತಹ ರಾಜ್ಯದಲ್ಲಿ ಶ್ರೀ ಆದಿನಾಥೇಶ್ವರ ದೇವಸ್ಥಾನವು ಮುಖ್ಯವಾದವುಗಳಲ್ಲಿ ಒಂದಾಗಿದೆ.

ಈ ಮಂದಿರವು ಮಂಗಳೂರು ವಿಮಾನ ನಿಲ್ದಾಣದಿಂದ ದಕ್ಷಿಣಕ್ಕೆ ಮೂರು ಕಿಲೋಮೀಟರ್ ದೂರ ಇರುವ ಆದ್ಯಪಾಡಿ ಗ್ರಾಮದಲ್ಲಿದೆ. ಈ ದೇವಳದ ಉತ್ತರಕ್ಕೆ ದೊಡ್ಡ ಬೆಟ್ಟವಿದೆ.

ಕೊಡಪಾನದಲ್ಲಿ ತೆಗೆದು ಅಭಿಷೇಕ ಮಾಡಬೇಕು. “ಅಭಿಷೇಕ ಪ್ರಿಯ ಶಂಕರ” ಎಂಬಂತೆ ಎಷ್ಟು ಅಭಿಷೇಕ ಮಾಡಿದೂ ಬಾವಿಯ ನೀರು ಒತ್ತುವುದಿಲ್ಲ. ದೇವಳಯದ ಅರ್ಚಕ ವರ್ಗದವರು ಕೂಡ ಸ್ನಾನ ಮಾಡದೆ ಆ ತೀರ್ಥ ಬಾವಿಯನ್ನು ಮುಟ್ಟುವಂತಿಲ್ಲ. ಅರ್ಚಕ ವರ್ಗದವರಲ್ಲದೆ ಬಾವಿಯ ನೀರನ್ನು ಯಾರು ಮುಟ್ಟುವಂತಿಲ್ಲ. ಫಲ್ಗುಣಿ(ಗುರುಪುರ) ಹೊಳೆಯಿದೆ. ದೇವಸ್ಥಾನದ ಮುಂಭಾಗದಲ್ಲಿ ಎರಡು ಕೆರೆಗಳಿವೆ. ಇದರಲ್ಲಿ ವರ್ಷವಿಡಿ ಶುದ್ಧವಾದ ನೀರು ಹರಿದುಕೊಂಡಿರುತ್ತದೆ. ಶ್ರೀ ದೇವರ ಬಲಭಾಗದಲ್ಲಿ ಮುಂಡಿತ್ತಾಯ ಮತ್ತು ಎಡಭಾಗದಲ್ಲಿ ಕಲ್ಲಿನ ಗೋಡೆಯಂತಿರುವ ಬಂಡೆಕಲ್ಲಿನಲ್ಲಿ ರಕ್ತೇಶ್ವರಿ ದೈವವಿದೆ. ನೈರುತ್ಯ ಪಾರ್ಶ್ವದಲ್ಲಿಶ್ರೀ ಗಣಪತಿ ದೇವರ ಗುಡಿಯಿದೆ. ಈಶಾನ್ಯ ಪಾರ್ಶ್ವದಲ್ಲಿ ನಾಗ ದೇವರ ಗುಡಿಯಿದೆ. ಗರ್ಭಗುಡಿಯ ಉತ್ತರ ಭಾಗದಲ್ಲಿ ಋಷಿವನವೆಂಬ ಪ್ರಖ್ಯಾತಿಯ ಜಾಗವಿದೆ ರೂಡಿಯಲ್ಲಿ ಋಷಿವನವೆಂದು ಕರೆಯುತ್ತಾರೆ. ಶ್ರೀ ದೇವರ ಲಿಂಗವು ಸ್ವಯಂ ಭೂಲಿಂಗವಾಗಿದ್ದು ರುದ್ರಾಕ್ಷಿ ಶಿಲೆಯೆಂದು ಪ್ರಖ್ಯಾತಿಗೊಂಡಿದೆ.

ಈ ಲಿಂಗದಲ್ಲಿ ಶಿವಶಕ್ತಿ, ವಿಷ್ಣುಶಕ್ತಿ, ದುರ್ಗಾಶಕ್ತಿ ಹಾಗೂ ವಿಶೇಷವಾಗಿ ನಾಗಶಕ್ತಿಯೂ ಪ್ರಬಲವಾಗಿ ಕೂಡಿದೆ ಎಂಬುದಾಗಿ ಅಷ್ಟಮಂಗಳ ಪ್ರಶ್ನೆಯಲ್ಲಿ ತಿಳಿದು ಬಂದಿದೆ. ಆ ಪ್ರಯುಕ್ತ ಉತ್ಸವದ ಕೊನೆಯ ದಿವಸ ಇಲ್ಲಿ ಭಕ್ತಾದಿಗಳಿಂದ ಉರುಳುಸೇವೆ ನಡೆಯುತ್ತದೆ.

ಶ್ರೀ ದೇವರ ಎಡಭಾಗದಲ್ಲಿ ಒಂದು ತೀರ್ಥ ಬಾವಿಯಿದೆ. ಇದು ಪ್ರಕೃತಿ ನಿರ್ಮಿತ ಬಾವಿ ಈ ಬಾವಿಯ ನೀರಿನಿಂದಲೇ ದೇವರ ಪೂಜಾದಿ ಕಾರ್ಯಗಳು ನಡೆಯುತ್ತವೆ.

ಆದ್ಯಪಾಡಿ ಕ್ಷೇತ್ರವು ಉಬ್ಬಸ (ಅಸ್ತಮಾ) ರೋಗಿಗಳಿಗೆ ಸಂಜೀವಿನಿ ವನವಾಗಿದೆ. ಶ್ರೀ ದೇವರ ಪ್ರಸಾದ ಸೇವನೆಯಿಂದ ಅತೀ ಶ್ರೀಘ್ರವಾಗಿ ಉಬ್ಬಸ ರೋಗವು ಮಾಯವಾಗಿ ಬಿಡುತ್ತದೆ. ಸಾವಿರಾರು ಉಬ್ಬಸ ರೋಗಿಗಳು ಇದರ ಪ್ರಯೋಜನವನ್ನು ಪಡೆದಿದ್ದಾರೆ. ಈಗಲೂ ಪಡೆಯುತ್ತಾ ಇದ್ದಾರೆ. ಅದಲ್ಲದೆ ಸಂತಾಸ ಪ್ರಪ್ತಿಗಾಗಿ ಪ್ರಾರ್ಥಿಸುವ ಭಕ್ತರಿಗೆ ಸಂತಾನನ ಕರುಣಿಸುತ್ತಾನೆ. ಚಿಕ್ಕ ಮಕ್ಕಳ ಮಣ್ಣು ತಿನ್ನುವ ಚಟವಿದ್ದರೆ, ಬೆಲ್ಲದ ಹರಕೆಯಿಂದ ಶಾಶ್ವತ ಚಟವನ್ನು ದೂರ ಮಾಡಿಕೊಳ್ಳಬಹುದು. ಅಲ್ಲದೆ ಆರಾಧಿಸಿದರೆ ಭಕ್ತರ ಕಷ್ಟಗಳನ್ನು ದೂರ ಮಾಡುವ ಪ್ರದಾಯಕನಾಗಿದ್ದಾನೆ ಶ್ರೀ ಆದಿನಾಥೇಶ್ವರ.

ಸಾವಿರಾರು ವರ್ಷಗಳ ಹಿಂದೆ ಶ್ರೀ ದೇವರ ಸನ್ನಿಧಿಯು ಈಗ ಇರುವ ದೇವಳದ ಬಡಗು ಪಾರ್ಶ್ವದಲ್ಲಿ ಬೆಟ್ಟದ ಮೇಲಿತ್ತು ಆ ಕಾಲದಲ್ಲಿ ಈಗ ಇರುವ ಕ್ಷೇತ್ರವು ಅರಣ್ಯಮಯವಾಗಿತ್ತು. ಅರ್ಚಕರು ಹೊಳೆಯಿಂದ ನೀರು ತಂದು ಪೂಜೆಯ ಕಾರ್ಯ ನೆರವೇರಿಸುತ್ತಿದ್ದರು. ಕ್ರಮೇಣ ಅರ್ಚಕರು ವಯಸ್ಸಾದಂತೆ ನದಿಯಿಂದ ನೀರು ತಂದು ಬೆಟ್ಟವೇರಿ ಪೂಜಾ ಕಾರ್ಯಗಳನ್ನು ಮಾಡಲು ಅಶಕ್ತರಾದರು. ಇದರಿಂದ ಬಳಿಕದ ಅರ್ಚಕರು ಒಂದು ದಿನ ಪೂಜೆ ಮಾಡಿ ದೇವರ ಎದುರು ಕಂಬನಿಯಿಂದ ಈ ರೀತಿ ಪ್ರಾರ್ಥಿಸಿದರು “ಇನ್ನು ಮುಂದೆ ನಿನ್ನ ಪೂಜೆ ಮಾಡಲು ನನಗೆ ವೃದ್ಧಾಪ್ಯದ ದೆಸೆಯಿಂದ ಅಸಾಧ್ಯವಾಗಿದೆ. ಆದ್ದರಿಂದ ನೀನು ಕೃಪೆದೋರಿ ನದಿಯ ಬಳಿಯಲ್ಲಿ ಬಂದು ನಿಂತರೆ ನಿನಗೆ ಇದಕ್ಕಿಂತ ಹೆಚ್ಚಿನ ರೀತಿಯಲ್ಲಿ ಅಭಿಷೇಕ ಪೂಜೆ ಮಾಡುತ್ತೇನೆ” ಎಂದು ತಮ್ಮ ಮನೆಗೆ ಬಂದರು. ಅವರ ಭಕ್ತಿಯ ಪ್ರಾರ್ಥನೆಗೆ ಮೆಚ್ಚಿದ ಶ್ರೀ ದೇವರು ಸ್ವಪ್ನದಲ್ಲಿ ಮೈದೋರಿ “ನಿನ್ನ ಪ್ರಾರ್ಥನೆಯಂತೆ ನಾನು ಹೊಳೆಯ ಬದಿಗೆಬರುವೆನು. ಅದರಂತೆ ಅರ್ಚಕರು ಮಾರನೇ ದಿನ ದೇವರಿಗೆ ಅಭಿಷೇಕ ಮಾಡಿ ಹಿಂತಿರುಗಿ ಬರುವಾಗ ವಾದ್ಯ ಘೋಷಣೆಯೊಂದಿಗೆ ಬರುವ ಧ್ವನಿಯು ಕೇಳುತ್ತದೆ. ಈಗೀನ ಗರ್ಭಗುಡಿ ಇರುವ ಸ್ಥಳಕ್ಕೆ ಬಂದಾಗ ಧ್ವನಿಯು ನಿಂತಾಗ ಅರ್ಚಕರು ಹಿಂತಿರುಗಿ ನೋಡಿದರು. ಆ ಸ್ಥಳದಲ್ಲಿಯೇ ಕಲ್ಲಿನ ರೂಪದಲ್ಲಿ ಅವರು ಅದೃಶ್ಯರಾಗಿರುತ್ತಾರೆ.

ಹೀಗೆ ಕೆಲವು ವರ್ಷಗಳಾದಾಗ ಈಗಿರುವ ಕ್ಷೇತ್ರದ ಹತ್ತಿರವೇ ಒಂದು ಮುಂಡಾಲ ಜಾತಿಯ ಸಂಸಾರವು ವಾಸವಾಗಿತ್ತು. ಆ ದಂಪತಿಗಳ ಹಿರಿಮಗ ಅಪಮೃತ್ಯುವಿಗೆ ತುತ್ತಾದ. ಇದಾದ ಕೆಲವು ದಿನಗಳ ನಂತರ ಕುಕ್ಕೆ ಹಣೆಯಲು ಬೀಳಲಿಗಾಗಿ ಅಲೆಯುತ್ತಾ ಇದ್ದ ದಂಪತಿಗಳಿಗೆ ಶಿಲೆಯ ಮೇಲಿದ್ದ ಒಳ್ಳೆಯ ಬೀಳಲನ್ನು ನೋಡಿ ಕಡಿಯುತ್ತಿರುವಾಗ ಅವಳ ಕೈಯಲ್ಲಿದ್ದ ಕತ್ತಿ ಶಿಲೆ ಮೇಲೆ ತಗಲಿ ಧಾರಾಕಾರವಾಗಿ ರಕ್ತ ಬರಲು ಪ್ರಾರಂಭವಾಯಿತು. ಇದನ್ನು ನೋಡಿ ಹೆದರಿದ ಹೆಂಗಸು ತನ್ನ ಅಳಿದ ಮಗನ ಹೆಸರನ್ನು ಹಿಡಿದು “ಓ ಮಗ ಅದ್ದಾ” ಎಂಬುದಾಗಿ ಉದ್ಗಾರ ತೆಗೆದಳು. ಆದ್ದರಿಂದ ಈ ಕ್ಷೇತ್ರಕ್ಕೆ ಆದ್ಯಪಾಡಿ ಎಂದು ಹೆಸರಾಯಿತು.

ಆ ಘಟನೆಯು ನಂತರ ಮುಂಡಾಲ ಹೆಂಗಸು ಜಾಗವನ್ನು ಬಿಟ್ಟು ಈಚೆಗೆ ಬರುವಾಗ ಒಬ್ಬ ಮುನಿಯು ತಪಸ್ಸು ಮಾಡುವುದನ್ನು ನೋಡಿದಳು. ಮುನಿಯ ಬಳಿಯಲ್ಲಿ ನಡೆದ ಘಟನೆಯನ್ನು ವಿವರಿಸಿದಳು. ಆ ಕಥೆಯನ್ನು ಆಲಿಸಿದ ಋಷಿಯು ತನ್ನ ದಿವ್ಯ ದೃಷ್ಟಿಯನ್ನು ಶಿಲೆಯ ಕಡೆಗೆ ಬೀರಿದನು. ಆಗ ಶಿವನು ಅಲ್ಲಿ ಐಕ್ಯವಾಗಿರುವುದು ಅವನ ದಿವ್ಯ ದೃಷ್ಟಿಗೆ ಗೋಚರವಾಯಿತು. ತನ್ನ ತಪಸ್ಸಿಗೆ ಮೆಚ್ಚಿ ಶಿವನು ಲಿಂಗದಲ್ಲಿ ಸಾಕ್ಷಾತ್ಕಾರವಾಗಿದ್ದಾನೆಂದು ತಿಳಿದು ಅಲ್ಲಿಯೇ ಶಿವನಿಗೆ ಗರ್ಭಗುಡಿಯನ್ನು ನಿರ್ಮಾಣ ಮಾಡಿ ಆರಾಧಿಸಲು ಪ್ರಾರಂಭಿಸಿದನು. ಆ ಮುನಿಯನ್ನು ಕಣ್ವ ಮಹರ್ಷಿಗಳೆಂದು ನಂಬಿದ್ದಾರೆ. ಕ್ರಮೇಣ ಕಾಲದ ಪರಿವರ್ತನೆಯಿಂದ ತನ್ನ ತಪಸ್ಸಿಗೆ ಭಂಗಬರಬಹುದೆಂದು ಆಲೋಚಿಸಿ ಅಲ್ಲಿಯೇ ಅಜ್ಞಾತರಾಗಿ ತಪಸ್ಸನ್ನು ಮುಂದುವರಿಸಿದರೆ ಎಂಬುದಾಗಿ ವದಂತಿ. ಈ ಸ್ಥಳವನ್ನು ‘ಋಷಿವನ’ ಎಂದು ಕರೆಯಲಾಯಿತು. ಈಗಲೂ ಅಲ್ಲಿ ಮಹರ್ಷಿಗಳು ಜೀವಂತವಾಗಿದ್ದಾರೆಂದು ಜನರ ನಂಬಿಕೆ ಆ ಋಷಿವನ ಸ್ಥಳದಲ್ಲಿ ಅಗೆಯಬಾರದು. ಕಸಕಟ್ಟಿಗಳನ್ನು ಒಗೆಯಬಾರದು. ಅದನ್ನು ಶುದ್ಧವಾಗಿರಿಸಬೇಕು. ಶಿಲಾಶಾಸನದ ಪ್ರಕಾರ ರಾಜಾ ವೀರಪ್ರತಾಪಸಿಂಹನ ಕಾಲದಲ್ಲಿ ದೇವಸ್ಥಾನವು ಅವನ ಆಡಳಿತದಲ್ಲಿತ್ತು ಎಂದು ಸ್ಪಷ್ಟವಾಗಿ ಹೇಳಬಹುದು. ಅಲ್ಲಿಂದ ದೇವಸ್ಥಾನದ ಆಡಳಿತವು ಚೌಟರಸರ ಆಳ್ವಿಕೆ ಒಳಪಟ್ಟಿತ್ತು. ಆ ನಂತರ ಜೈನರಸರ ಆಳ್ವಿಕೆಯಲ್ಲಿದ್ದು ಕ್ರಮೇಣ ಬ್ರಾಹ್ಮಣ ವಂಶಕ್ಕೆ ವರ್ಗಾಯಿಸಲ್ಪಟ್ಟಿತ್ತು.

ಚೌಟರಸರ ಆಳ್ವಿಕೆಯ ಕಾಲದಲ್ಲಿ ಚೌಟರಸನ ಪಟ್ಟದರಸಿಗೆ ಒಂದು ದಿನ ಉಬ್ಬಸ ರೋಗ ಪ್ರಾರಂಭವಾಯಿತು. ರಾಜವೈದ್ಯರು ಹಾಗೂ ಅನೇಕ ಊರುಗಳಿಂದ ಬಂದ ಪರಿಣತ ವೈದ್ಯರು ಶುಶ್ರೂಷೆ ಮಾಡಿದರೂ ರೋಗ ವಾಸಿಯಾಗಲಿಲ್ಲ. ಇದರಿಂದ ಬೇಸರಗೊಂಡ ರಾಣಿಯು ಜೀವನದಲ್ಲಿ ಜಿಗುಪ್ಸೆಗೊಂಡು ಭಕ್ತ್ತಿಯಿಂದ ದೇವರನ್ನು ಆರಾಧಿಸತೊಡಗಿದಳು. ಅವಳ ಭಕ್ತಿಗೆ ಮೆಚ್ಚಿ ರಾತ್ರಿ ಸ್ವಪ್ನದಲ್ಲಿ ದೇವರು ಕಾಣಿಸಿಕೊಂಡು ಆದ್ಯಪಾಡಿ ಶ್ರೀ ಆದಿನಾಥೇಶ್ವರನ ದರ್ಶನ ಮಾಡಿ ತೀರ್ಥ ಪ್ರಸಾದವನ್ನು ಸೇವಿಸಿದಲ್ಲಿ ರೋಗವು ವಾಸಿಯಾಗುವುದು ಎಂಬುದಾಗಿ ಅಭಯ ನೀಡಿದರು. ಮರುದಿನವೇ ರಾಣಿಯು ಆದಿನಾಥೇಶ್ವರ ದರ್ಶನ ಮಾಡಿ ಭಕ್ತಿಯಿಂದ ಹನ್ನೆರಡು ದಿವಸ ತೀರ್ಥಪ್ರಸಾದಗಳನ್ನು ಸೇವಿಸಿ ರೋಗದಿಂದ ಮುಕ್ತಳಾದಳು. ಇದರಿಂದ ಸಂತಸಗೊಂಡ ಮಹಾರಾಣಿ ತನ್ನ ಕೊರಳಲ್ಲಿದ್ದ ತಾಳಿಬಂದಿಯನ್ನು ದೇವರಿಗೆ ಅರ್ಪಿಸಿದಳು. ಅದನ್ನು ಈಗಲೂ ಜಾತ್ರೆಯ ಸಮಯದಲ್ಲಿ ದೇವರಿಗೆ ಅಲಂಕಾರಕ್ಕಾಗಿ ಉಪಯೋಗಿಸುತ್ತಾರೆ. ಅನಂತರ ಮಹಾರಾಣಿ ದೇವರಲ್ಲಿ ಅನನ್ಯ ಭಕ್ತಿಯಿಂದ ಪ್ರಾರ್ಥಿಸುತ್ತಾ ಬಂದ ಭಕ್ತಾದಿಗಳ ಉಬ್ಬಸ ಕಾಯಿಲೆಯನ್ನು ತೀರ್ಥಪ್ರಸಾದದಿಂದ ಗುಣಪಡಿಸಬೇಕೆಂದು ಆದಿನಾಥೇಶ್ವರನಲ್ಲಿ ಬೇಡಿಕೊಂಡಳು. ಇವರ ಭಕ್ತಿಗೆ ಒಲಿದ ಶ್ರೀ ದೇವರು ರಾಣಿಯ ಕೋರಿಕೆಯನ್ನು ಈಡೇರಿಸಿದರು. ಅನಂತರ ನೇವಸವು ಬರೆ ತೀರ್ಥ ಪ್ರಸಾದದಿಂದ ಗುಣವಾಗುತ್ತಿದೆ. ಈಗಲೂ ನಾನಾ ಊರಿನಿಂದ ಉಬ್ಬಸ ರೋಗಿಗಳು ಬಂದು ಹರಿಕೆಯನ್ನು ಸಲ್ಲಿಸಿ ದೇವರ ಪ್ರಸಾದ ಸೇವಿಸಿ ಉಬ್ಬಸ ರೋಗದಿಂದ ಮುಕ್ತರಾಗುತ್ತಾ ಇದ್ದಾರೆ. ಬೂದುಕುಂಬಳಕಾಯಿ, ಬೆಳ್ಳಿ ಸರಿಗೆ, ಹುರಿಹಗ್ಗ, ಗಂಧದ ಕೊರಡು, ಒಳ್ಳೆಮೆಣಸು ಕಾಣಿಕೆಯಾಗಿರುತ್ತದೆ.

ವೀರ ಪ್ರತಾಪ ಸಿಂಹನು ಪ್ರತಿ ದ್ವಾದಶಿಯಂದು ಬ್ರಾಹ್ಮಣಾರಾಧನೆ ನಡೆಯಬೇಕೆಂದು ಕೆಲವು ಜಮೀನುಗಳನ್ನು ದೇವರಿಗೆ ಉಂಬಳಿ ಕೊಟ್ಟಿದ್ದಾನೆಂದು ಶಿಲಾಶಾಸನದಿಂದ ತಿಳಿದುಬರುತ್ತದೆ.

ಬ್ರಾಹ್ಮಣಾರಾಧನೆಯ ಅಡುಗೆಗೆ ಬೂದುಕುಂಬಳಕಾಯಿಯನ್ನು ಉಪಯೋಗಿಸುತ್ತಿದ್ದರು. ಹಿಂದಿನ ಕಾಲದಲ್ಲಿ ದೇವಸ್ಥಾನದ ಛಾವಣಿಯು ದಂಬೆ ಹಂಚಿನಿಂದ ರಚಿತವಾಗಿದ್ದು ಆ ಛಾವಣಿಯ ರಚನೆಗೆ ಹುರಿಹಗ್ಗವನ್ನು, ವೈಶಾಖ ಮಾಸದಲ್ಲಿ ಶ್ರೀ ದೇವರಿಗೆ ಬೆಲ್ಲದ ಪಾನಕಕ್ಕಾಗಿ ಒಳ್ಳೆಮೆಣಸನ್ನೂ, ಶ್ರೀಗಂಧವು ದೇವರ ಪೂಜಾದಿ ಕಾರ್ಯಗಳಿಗೆ ಮತ್ತು ಪ್ರಸಾದವನ್ನಾಗಿಯೂ, ಬೆಳ್ಳಿಬೆಟ್ಟದೊಡೆಯ ಶಿವನಾದುದರಿಂದ ಶಿವನಿಗೆ ಪ್ರಿಯವಾದ ಬೆಳ್ಳಿಯನ್ನು ಸರಿಗೆಯ ರೂಪದಲ್ಲಿಯೂ, ಶ್ರೀ ದೇವರ ನಿತ್ಯ ವಿನಿಯೋಗಕ್ಕೆ ಹಣದ ಅವಶ್ಯ ಇದ್ದುದರಿಂದ ಕಾಣಿಕೆ ರೂಪದಲ್ಲಿ ಹಣವನ್ನು ಉಬ್ಬಸರೋಗಿಗಳು ಹರಕೆಯ ರೂಪದಲ್ಲಿ ಒಪ್ಪಿಸುತ್ತಿದ್ದಾರೆ. ಈ ಮೇಲಿನ ಹರಕೆಗಳಲ್ಲಿ ಯಾವುದೇ ವಸ್ತುವಿನ ಕೊರತೆಯಾದರೂ ಉಬ್ಬಸರೋಗವು ಸಂಪೂರ್ಣ ಗುಣಮುಖವಾಗುವುದಿಲ್ಲವೆಂದು ತಿಳಿದು ಬರುತ್ತದೆ.

12, 13 ನೇ ಶತಮಾನಕ್ಕೆ ಸೇರಿದ್ದು 800 ವರ್ಷಗಳಾಗಿದೆ. ಉದ್ಭವ ಮೂರ್ತಿಯು ಶ್ರೀ ದೇವರ ಲಿಂಗವು ಸ್ವಯಂ ಭೂಲಿಂಗವಾಗಿದ್ದು ರುದ್ರಾಕ್ಷಿ ಶಿಲೆಯೆಂದು ಪ್ರಖ್ಯಾತಿಗೊಂಡಿದೆ. ದೇವರ ದರುಶನಕ್ಕೆ ಬರುವ ಭಕ್ತರ ಉಬ್ಬಸ ಕಾಯಿಲೆ, ಅಸ್ತಮಾ ಸಂತಾನ ಭಾಗ್ಯ, ಮದುವೆ, ಮುಂತಾದ ಫಲಗಳು ಲಭಿಸುತ್ತವೆ. ದೇವಾಲಯವು ಅಭೀಷೇಕ ತೀರ್ಥ, ಗಂಧ, ಪ್ರಸಾದ ಉಬ್ಬಸ ಕಾಯಿಲೆಗೆ ವಿಶೇಷತೆಯಿಂದ ಪ್ರಸಿದ್ಧಿಯಾಗಿದೆ. ಜಾತ್ರಾ ಸಮಯದಲ್ಲಿ ನಡೆಯುವ ತುಲಾಭಾರ, ಕಂಚಿಲು ಸೇವೆ, ಶತರುದ್ರಭಿಷೇಕ, ರಂಗಪೂಜೆ ಇತ್ಯಾದಿ, ದೇವಾಲಯವು ಮಂಗಳೂರು ವಿಮಾನ ನಿಲ್ದಾಣದಿಂದ ದಕ್ಷಿಣಕ್ಕೆ ಮೂರು ಕಿಲೋ ಮೀಟರ್ ದೂರ ಇರುವ ಆದ್ಯಪಾಡಿ ಗ್ರಾಮದಲ್ಲಿದೆ. ಉತ್ತರಕ್ಕೆ ದೊಡ್ಡ ಬೆಟ್ಟವಿದೆ, ದಕ್ಷಿಣಕ್ಕೆ ಫಲ್ಗುಣಿ ಹೊಳೆಯಿದೆ. ಶ್ರೀ ದೇವಾಲಯದ ಗರ್ಭಗುಡಿಯ ಎಡಭಾಗದಲ್ಲಿ ಕಲ್ಲು, ಬಂಡೆ, ಮರ, ಮಣ್ಣು, ಗುಡ್ಡದಿಂದ ಕೂಡಿದ ಋಷಿವನವೆಂಬ ಪ್ರಖ್ಯಾತಿ ಜಾಗವಿದೆ ಅದನ್ನು ಋಷಿವನವೆಂದು ಕರೆಯುತ್ತಾರೆ. ದೇವಾಲಯವು ಶಿಲಾಶಾಸನದ ಪ್ರಕಾರ ಕಾರ್ಕಳದ ರಾಜಾ ವೀರ ಪ್ರತಾಪ ಸಿಂಹನ ಕಾಲದಲ್ಲಿ ದೇವಸ್ಥಾನವು ಅವನ ಆಡಳಿತದಲ್ಲಿತ್ತು ಅಲ್ಲಿಂದ ದೇವಸ್ಥಾನವು ಚೌಟರಸರ ಆಳ್ವಿಕೆಗೆ ಒಳಪಟ್ಟಿತ್ತು. ಅನಂತರ ಜೈನರಸರ ಆಳ್ವಿಕೆಯಲ್ಲಿದ್ದು ನಂತರ ಬ್ರಾಹ್ಮಣರ ಆಡಳಿತಕ್ಕೆ ಒಳಪಟ್ಟಿದೆ. ದೇವಾಲಯದ ಸಮೀಪ ಬಂಡೆಯಲ್ಲಿ ಶಾಸನಗಳಲ್ಲಿ ದೇವಾಲಯದ ಸಂಬಂಧದ ಉಲ್ಲೇಖವಿದೆ. ದೇವಾಲಯವು ಉದ್ಭವ ಮೂರ್ತಿಯಾಗಿರುತ್ತದೆ. ದೇವಾಲಯದಲ್ಲಿ ಧ್ವಜಾರೋಹಣದ ದಿನದಂದು ಕಂಚಿಲು ದೀಪ ಸೇವೆ ಎಂಬ ವಿಶೇಷ ಸೇವೆ ನಡೆಯುತ್ತದೆ. ಬಾಲಗ್ರಹ ಪೀಡಿತ ಮಕ್ಕಳಿಗೆ ಹೇಳಿಕೊಳ್ಳುವ ಹರಕೆ 7 ವರ್ಷದ ಮಕ್ಕಳಿಗೆ ಸೀಮಿತ ತುಲಾಭಾರ ಸೇವೆಯು ಭಕ್ತಾದಿಗಳು ತಮ್ಮ ಕಷ್ಟ ಪರಿಹಾರಕ್ಕೆ ವಸ್ತು ರೂಪದಲ್ಲಿ ತನ್ನಷ್ಟೆ ಬಾರದ ನೀಡುವ ಒಂದು ಸಾಂಕೇತಿಕ ಕ್ರಮಕ್ಕೆ ತುಲಾಭಾರ ಅನ್ನುತ್ತಾರೆ. ದೇವರ ಗಂಧ ಪ್ರಸಾದದ ವಿಶೇಷತೆ. ದೇವಾಲಯದಲ್ಲಿ ಜಾತ್ರಾ ಸಮಯದಂದು ಕೆರೆಯ ತೀರ್ಥ ಸ್ನಾನ ಮಾಡಿ ಉರುಳು ಸೇವೆ. ದೇವರ ತೀರ್ಥ ಪ್ರಸಾದ ಪರಿಹಾರ.