ಬೆಳಗಾವಿ : ಜೂನ್ 15 ರಂದು ಬೆಳಗಾವಿಯ ರಾಣಿ ಚನ್ನಮ್ಮ ನಗರದಲ್ಲಿರುವ ಶ್ರೀ ಸತ್ಯ ಪ್ರಮೋದ ಸಭಾಗೃಹದಲ್ಲಿ ತ್ರಿ ಮತಸ್ತ ಬ್ರಾಹ್ಮಣರ ವಧು ವರ ಸಮಾವೇಶವನ್ನು ಶ್ರೀ ಸಪ್ತಗಿರಿ ಸೇವಾ ಪ್ರತಿಷ್ಟಾನ ಬೆಳಗಾವಿ ಮತ್ತು ವಿಶ್ವ ಮಧ್ವ ಮಹಾ ಪರಿಷತ್ ಬೆಳಗಾವಿ ವತಿಯಿಂದ ಆಯೋಜಿಸಲಾಗಿದೆ.

ಈ ಎರಡು ಸಂಘಟನೆಗಳು ಸಮಾಜದ ಎಲ್ಲ ಬಾಂಧವರಿಗೆ ಅನುಕೂಲ ಆಗಲೆಂದು ಮಾಡಿರುವ ವೇದಿಕೆ. ವಿವಾಹವು ಹಿಂದೂ ಕುಟುಂಬ ವ್ಯವಸ್ಥೆಯ ಮೌಲ್ಯಧಾರಿತವೆಂದು ಪರಿಗಣಿಸಲಾಗಿದೆ. ಈ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಆರೋಗ್ಯಕರ ಸಮಾಜವನ್ನು ನಿರ್ಮಿಸಲು ಸದಾ ಈ ಸಂಸ್ಥೆಗಳು ಮುಂಚೂಣಿಯಲ್ಲಿ ಇರುತ್ತವೆ. ಈಗಾಗಲೇ ಈ ಕಾರ್ಯಕ್ರಮವನ್ನು ಕಳೆದ ಬಾರಿ ಇವೆ ಸಂಘಟನೆಗಳು ಆಯೋಜಿಸಿದಾಗ ಸುಮಾರು 300 ವಧು ಹಾಗೂ 450 ವರಗಳ ಹೆಸರುಗಳನ್ನೂ ನೋಂದಾಯಿಸಲಾಗಿತ್ತು ಮತ್ತು ಅದರಲ್ಲಿ ಸುಮಾರು 25 ಮದುವೆಗಳು ಯಶಸ್ವಿಯಾಗಿ ನಡೆದಿವೆ. ಹಾಗಾಗಿ ಈ ಬಾರಿಯು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ವಧು ವರರು ಒಟ್ಟಾಗಿ ಸೇರಿ ಜೀವಮಾನದ ವೈವಾಹಿಕ ಬಂಧನವನ್ನು ಸ್ಥಾಪಿಸುವ ಕಡೆಗೆ ಈ ವೇದಿಕೆ ಮುಖಾಂತರ ವಿನಂತಿಸುತ್ತೇವೆ ಎಂದು ಸಂಘಟನೆ ಮುಖಂಡರು ತಿಳಿಸಿದರು.

ಹೆಚ್ಚಿನ ಮಾಹಿತಿಗಾಗಿ ಇಲ್ಲಿಗೆ ಸಂಪರ್ಕಿಸಬಹುದು. ರಾಘವೇಂದ್ರ ಕಟ್ಟಿ 7353351159,
ಶ್ರೀಧರ ಹಲಗತ್ತಿ 7338233598, ಶ್ರೀದೇವಿ ಕುಲಕರ್ಣಿ 9480677976,
ಜ್ಯೋತಿ ಶೆಳ್ಳಿಕೇರಿ 9845249632