Join The Telegram | Join The WhatsApp |
ಮುಂಬೈ-
ಭಾರತೀಯ ರಿಸರ್ವ್ ಬ್ಯಾಂಕ್ ಸಾವರಿನ್ ಗೋಲ್ಡ್ ಬಾಂಡ್ 2022-23ನೇ ಸಾಲಿನ ಮೂರನೇ ಸರಣಿಯ ಚಂದಾದಾರಿಕೆಯನ್ನು ಡಿಸೆಂಬರ್ 19ರಿಂದ ಡಿಸೆಂಬರ್ 23 ರ ತನಕ ಐದು ದಿನಗಳ ಕಾಲ ನಡೆಸಲಿದೆ. ಸಾವರಿನ್ ಗೋಲ್ಡ್ ಬಾಂಡ್ ವಿತರಣೆ ಬೆಲೆಯನ್ನು ಪ್ರತಿ ಗ್ರಾಂಗೆ 5,409 ರೂ.ನಿಗದಿಪಡಿಸಲಾಗಿದೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ಮೂಲಕ ಆರ್ ಬಿಐ ಮಾಹಿತಿ ನೀಡಿದೆ. ಆನ್ ಲೈನ್ ನಲ್ಲಿ ಸಾವರಿನ್ ಗೋಲ್ಡ್ ಬಾಂಡ್ ಗೆ ಅರ್ಜಿ ಸಲ್ಲಿಸಿದ್ರೆ ಹಾಗೂ ಡಿಜಿಟಲ್ ಪಾವತಿ ಮಾಡಿದ್ರೆ ಪ್ರತಿ ಗ್ರಾಂಗೆ 50ರೂ. ಡಿಸ್ಕೌಂಟ್ ಸಿಗಲಿದೆ. 022-23ನೇ ಸಾಲಿನ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯ ಎರಡನೇ ಸರಣಿಯ ಚಂದಾದಾರಿಕೆ ಆಗಸ್ಟ್ 22ರಿಂದ 26ರ ತನಕ ನಡೆದಿತ್ತು. ಇನ್ನು ಮೊದಲನೇ ಸರಣೆ ಚಂದಾದಾರಿಕೆ ಜೂನ್ 20-24ರ ತನಕ ನಡೆದಿತ್ತು.ಒಬ್ಬ ವ್ಯಕ್ತಿ ಅಥವಾ ಹಿಂದೂ ಅವಿಭಕ್ತ ಕುಟುಂಬ ವಾರ್ಷಿಕ ಗರಿಷ್ಠ 4ಕೆ.ಜಿ.ಮೌಲ್ಯದ ಸಾವರಿನ್ ಗೋಲ್ಡ್ ಬಾಂಡ್ ಖರೀದಿಸಬಹುದು. ಟ್ರಸ್ಟ್ ಹಾಗೂ ಅದೇ ಮಾದರಿಯ ಇತರ ಸಂಸ್ಥೆಗಳು ಗರಿಷ್ಠ 20ಕೆ.ಜಿ ಸಾವರಿನ್ ಗೋಲ್ಡ್ ಬಾಂಡ್ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಕನಿಷ್ಠ 1ಗ್ರಾಂ ಚಿನ್ನವಾದ್ರೂ ಖರೀದಿಸಬೇಕು. ಅದಕ್ಕೆ ಕಡಿಮೆ ಚಿನ್ನ ಖರೀದಿಸಲು ಅವಕಾಶವಿಲ್ಲ.
Join The Telegram | Join The WhatsApp |