
ದೆಹಲಿ: ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನವಾದ ಏ.14 ನ್ನು ದೇಶಾದ್ಯಂತ ಸರ್ಕಾರಿ ರಜೆಯನ್ನಾಗಿ ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ಕೇಂದ್ರ ಸಾಂಸ್ಕೃತಿಕ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಈ ಘೋಷಣೆ ಮಾಡಿ, ‘ಸಂವಿಧಾನ ಶಿಲ್ಪಿ, ಸಮಾಜದಲ್ಲಿ ಸಮಾನತೆಯ ಹೊಸ ಯುಗ ಸ್ಥಾಪಿಸಿದ್ದ ಡಾ। ಅಂಬೇಡ್ಕರ್ ಅವರ ಜಯಂತಿಯನ್ನು ಇನ್ನು ಮುಂದೆ ಸಾರ್ವಜನಿಕ ರಜೆಯನ್ನಾಗಿ ಘೋಷಿಸಲಾಗಿದೆ. ಈ ನಿರ್ಧಾರ ತೆಗೆದುಕೊಂಡು ಅಂಬೇಡ್ಕರ್ ಅವರ ಪರಮ ಭಕ್ತರಾಗಿರುವ ಪ್ರಧಾನಿ ಮೋದಿ ಅವರು ದೇಶದ ಭಾವನೆಗೆ ಗೌರವ ಸೂಚಿಸಿದ್ದಾರೆ’ ಎಂದು ಹೇಳಿದ್ದಾರೆ. ಕರ್ನಾಟಕ ಸೇರಿ ಕೆಲವು ಕಡೆ ಅಂಬೇಡ್ಕರ್ ಜಯಂತಿ ಈಗಾಗಲೇ ಸರ್ಕಾರಿ ರಜಾ ದಿನವಾಗಿದೆ.