ಬೆಂಗಳೂರು :
ಜೈ ಶ್ರೀ ರಾಮ ಅಲ್ಲ ಜೈ ಜೈ ಸೀತಾರಾಮ್ ಎಂದು ಹೇಳಬೇಕು. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ಪಕ್ಷದ ಸದಸ್ಯರಿಗೆ ನೀಡಿದ ಸಲಹೆ.

ವಿಧಾನಸಭಾ ಕಲಾಪ ಆರಂಭವಾದ ಕೂಡಲೇ ಬಿಜೆಪಿ ಸದಸ್ಯರು ಜೈ ಶ್ರೀರಾಮ್ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರುಮ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಮಾತು ಆರಂಭಿಸುತ್ತಿದ್ದಂತೆ ಬಿಜೆಪಿ ಸದಸ್ಯರು ಜೈ ಶ್ರೀರಾಮ್ ಘೋಷಣೆ ಕೂಗಲು ಆರಂಭಿಸಿದ್ದಾರೆ. ಬಿಜೆಪಿ ಸದಸ್ಯರ ವರ್ತನೆಗೆ ಕಿಡಿ ಕಾರಿದ ಸಿದ್ದರಾಮಯ್ಯ ಅವರು ಜೈ ಜೈ ಸೀತಾರಾಮ್ ಎಂದು ಎರಡು ಬಾರಿ ಘೋಷಣೆ ಕೂಗುವ ಮೂಲಕ ಗಮನ ಸೆಳೆದಿದ್ದಾರೆ.
ನಿಮ್ಮದು ನಿಶಕ್ತಿ..
ಇದೇ ವೇಳೆಗೆ ಮೋದಿ ಮೋದಿ, ಜೈ ಶ್ರೀ ರಾಮ್ ಎಂದು ಕೂಗು ಹಾಕುತ್ತಿದ್ದ ವಿರೋಧಪಕ್ಷದವರನ್ನು ಉದ್ದೇಶಿಸಿ ನಿಮ್ಮದು ಕೇವಲ ನಿ:ಶಕ್ತಿ. ಮೋದಿ ಹೆಸರಿನ ಮೇಲೆ ನಡೆಸುತ್ತಿದ್ದೀರಿ.ಸಮಾಜ ಒಡೆಯುವ ಕೆಲ್ಸ ನಿಮ್ಮದು. ನಾವು ಜೈ ಸೀತಾ ರಾಮ್ ಎನ್ನುತ್ತೇವೆ ಎಂದು ಮುಖ್ಯ ಮಂತ್ರಿಗಳು ಘೋಷಣೆ ಕೂಗಿದರು.
ಬಿಜೆಪಿ ಗೆ ತಲೆ ಖಾಲಿ, ಮೆದುಳು ಇಲ್ಲ. ರಾಮಾಯಾಣ ಮಹಾಭಾರತ ಓದಿಕೊಂಡೇ ಇಲ್ಲ ಎಂದು ತಿವಿದರು.

*15ನೇ ಹಣಕಾಸು ಆಯೋಗ ಬಂದಾಗ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು. ನಮಗೆ ದೊಡ್ಡ ಅನ್ಯಾಯ ಆಯಿತು. ನಾನು 14 ನೇ ಹಣಕಾಸು ಆಯೋಗದಲ್ಲಿ ಮುಖ್ಯಮಂತ್ರಿ ಆಗಿದ್ದೆ. ನಮಗೆ ಇಷ್ಟೊಂದು ಅನ್ಯಾಯ ಆಗಲಿಲ್ಲ.*

*ರಾಜ್ಯದ ಪಾಲಿನ ಕೇಂದ್ರದ ಪರಿಹಾರ ಜೂನ್‌ 2022 ಸ್ಥಗಿತಗೊಳಿಸಲಾಗಿದೆ*

*ನಾವು ಸೀತಾರಾಮ್ ಎನ್ನುವವರು. ನಮ್ಮ ಊರಿನಲ್ಲಿ ನಾನು ಎರಡೆರಡು ರಾಮ ಮಂದಿರ ಕಟ್ಟಿಸಿದ್ದೇನೆ: ಸಿಎಂ ಸಿದ್ದರಾಮಯ್ಯ*

*ಬಿಜೆಪಿಯವರು ರಾಮಾಯಣ, ಮಹಾಭಾರತ ಓದಿಯೇ ಇಲ್ಲ*

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟ ಮುಖ್ಯಮಂತ್ರಿಗಳು
15ನೇ ಹಣಕಾಸು ಆಯೋಗ ಬಂದಾಗ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು. ನಾನು 14 ನೇ ಹಣಕಾಸು ಆಯೋಗದಲ್ಲಿ ಮುಖ್ಯಮಂತ್ರಿ ಆಗಿದ್ದೆ. ನಮಗೆ ಇಷ್ಟೊಂದು ಅನ್ಯಾಯ ಆಗಲಿಲ್ಲ. ಪರಿಹಾರ ಜೂನ್‌ 2022 ಸ್ಥಗಿತಗೊಳಿಸಲಾಗಿದೆ. ಹಿಂದೆ ಹೆಚ್ಚುವರಿ ಅನುದಾನ ಕೊಟ್ಟಿದ್ದೇವೆಂದು ಈಬಾರಿ ಕಡಿತಗೊಳಿಸಿದ್ದಾರೆ. ಇಷ್ಟೆಲ್ಲ ಅನ್ಯಾಯವಾಗುತ್ತಿದೆ ಎಂದರೂ ಅವರು ಕೇಂದ್ರ ಸರ್ಕಾರವನ್ನು ಬೆಂಬಲಿಸುತ್ತಿದ್ದಾರಲ್ಲಾ? ನೀವು ಕನ್ನಡಿಗರಾ? ನಾಡ ದ್ರೋಹಿಗಳು ಎಂದು ಹೇಳಬೇಕಾಗುತ್ತದೆ. ಎಂದರು.

*ನಾವೂ ರಾಮನ ಭಕ್ತರೇ*

ಮಾತೆತ್ತಿದರೆ ಜೈಶ್ರೀರಾಮ್‌ ಅನ್ನುತ್ತಾರೆ. ನಾವೇನು ರಾಮನ ಭಕ್ತರಲ್ಲವೆ. ನಮ್ಮ ಊರಿನಲ್ಲಿ ಎರಡು ರಾಮಮಂದಿರ ಕಟ್ಟಿಸಿದ್ದೇನೆ. ನಾನು ರಾಮನ ಭಕ್ತನಲ್ಲವೇ? ಇವರು ರಾಮ- ಸೀತೆಯರನ್ನು ಬೇರೆ ಮಾಡಿದ್ದಾರೆ. ಮಹಾತ್ಮಾ ಗಾಂಧೀಜಿ ಹೇಳಿದ ಸೀತಾರಾಮನಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ.
ನಾವು ರಾಷ್ಟ್ರಭಕ್ತರು. ಈ ದೇಶದ ಜನರನ್ನು ಪ್ರೀತಿಸುವವರು. ಎಲ್ಲ ಧರ್ಮದ ಜನರನ್ನು ಪ್ರೀತಿಸುವವರು ಕಾಂಗ್ರೆಸ್‌ ಪಕ್ಷದವರು. ಇವರ ತರ ಬುರ್ಖಾ ಹಾಕಿದವರು, ಟೋಪಿ ಹಾಕಿದವರು ಬರಬೇಕಾಗಿಲ್ಲ ಎನ್ನುವುದಿಲ್ಲ.

*ಬೆಲೆ ಏರಿಕೆ, ಸಂಕಷ್ಟಕ್ಕೆ ಗ್ಯಾರಂಟಿ ಉತ್ತರ*
ಸಬ್‌ ಕಾ ಸಾಥ್‌ ಎಂದವರು ಪೆಟ್ರೋಲ್‌ ಡೀಸೆಲ್‌ ಬೆಲೆ, ಗ್ಯಾಸ್‌ ಬೆಲೆ, ಅಗತ್ಯವಸ್ತುಗಳ ಬೆಲೆ ಏರಿಸಿದರು. ಬಡವರಿಗೆ ನಿರುದ್ಯೋಗ, ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರಿಗೆ ನಾವು ಗ್ಯಾರಂಟಿ ಯೋಜನೆಗಳ ಮೂಲಕ ನಾಲ್ಕರಿಂದ ಐದು ಸಾವಿರ ರೂ. ಕೊಡ್ತಾ ಇದ್ದೀವಿ. 1.2 ಕೋಟಿ ರೂ. ಕುಟುಂಬಗಳು ಅಂದರೆ ಸುಮಾರು 4.5 ಕೋಟಿ ಜನರಿಗೆ ಕೊಡ್ತಾ ಇದ್ದೀವಿ.
ಈಗ ಅವರು ನಮ್ಮನ್ನು ಕಾಪಿ ಮಾಡುತ್ತಿದ್ಧಾರೆ. ಈಗ ಮೋದಿ ಗ್ಯಾರಂಟಿ ಎಂದು ಹೇಳುತ್ತಾರೆ. ಈ ಮೋದಿ ಗ್ಯಾರಂಟಿಯಲ್ಲಿ ಶೇ. 50 ರಿಂದ 60 ರಷ್ಟು ಪಾಲು ಕರ್ನಾಟಕದ್ದೂ ಇದೆ. ಇವರು ಕನ್ನಡಿಗರಿಗೆ ದ್ರೋಹ ಮಾಡುತ್ತಿಲ್ಲವೇ?
25 ಜನ ಎಂಪಿಗಳು ಗೆದ್ದು ಹೋಗಿದ್ದಾರೆ. 15ನೇ ಹಣಕಾಸು ಆಯೋಗದಲ್ಲಿ ಶಿಫಾರಸು ಮಾಡಿರುವ ಅನುದಾನ ಕೇಳಿದ್ದಾರೆಯೇ? ಅವರಿಗೆ ತಾಕತ್ತಿಲ್ಲ.
ಬರ ಪರಿಹಾರಕ್ಕೆ ಪ್ರಸ್ತಾವನೆ ಅಕ್ಟೋಬರ್‌ ನಲ್ಲಿಯೇ ಕಳಿಸಿದ್ದೆವು. ನೇರವಾಗಿ ಪ್ರಧಾನಮಂತ್ರಿಯವರು ಹಾಗೂ ಅಮಿತ್‌ ಷಾ ಅವರನ್ನು ಭೇಟಿ ಮಾಡಿದೆ. 240 ರಲ್ಲಿ 223 ತಾಲ್ಲೂಕುಗಳು ಬರಪೀಡಿತವಾಗಿವೆ ಎಂದು ಪರಿಹಾರ ನೀಡುವಂತೆ ಮನವಿ ಮಾಡಿದೆ. ಡಿಸೆಂಬರ್‌ 23ರಂದು ಸಭೆ ಕರೆಯುವುದಾಗಿ ಕೇಂದ್ರ ಸಚಿವರು ಹೇಳಿದರೂ ಈ ವರೆಗೆ ಸಭೆ ನಡೆಸಿಲ್ಲ. ನಾವು ತಾತ್ಕಾಲಿಕವಾಗಿ 33 ಲಕ್ಷ ರೈತರಿಗೆ ಪರಿಹಾರ ವಿತರಿಸಿದ್ದೇವೆ.
ಈ ಸಂಸದರು ಈ ಬಗ್ಗೆ ಮೌನ ವಹಿಸಿದ್ದಾರೆ. ಕರ್ನಾಟಕದ ಜನ ಇವರನ್ನು ಮುಂಬರುವ ಚುನಾವಣೆಯಲ್ಲಿ ತಿರಸ್ಕರಿಸಬೇಕು.
ಶಿಕ್ಷಣ, ಆರೋಗ್ಯ ಇಲಾಖೆ, ಕಾನೂನು ಸುವ್ಯವಸ್ಥೆ, ರಸ್ತೆಗಳಿಗೆ, ನೀರಾವರಿ, ಪಿಂಚಣಿ, ಗ್ರಾಮೀಣಾಭಿವೃದ್ಧಿ ಎಲ್ಲ ವಲಯಗಳಿಗೂ ಅನುದಾನ ಹೆಚ್ಚಾಗಿಯೇ ಕೊಟ್ಟಿದ್ದೇವೆ.
ಕೇಂದ್ರ ಸರ್ಕಾರದಿಂದ ಹಣ ಬರುತ್ತದೆ ಎಂದು ಪದೇ ಪದೇ ಹೇಳುತ್ತಾರೆ. ಈ ಹಣ ಯಾರಿಂದ ಬರುತ್ತದೆ? ನಮ್ಮ ತೆರಿಗೆಯಿಂದ. ಆದ್ದರಿಂದಲೇ ನಾವು ಹೇಳುವುದು ನಮ್ಮ ತೆರಿಗೆ ನಮ್ಮ ಹಕ್ಕು.
ಸೆಸ್‌, ಸರ್ಚಾರ್ಜ್‌ ನಲ್ಲಿ ನಮಗೆ ಪಾಲು ಕೊಡುವುದಿಲ್ಲ. ಸೆಸ್‌, ಸರ್ಚಾರ್ಜ್‌ ಮೂಲ 5,52,000 ಕೋಟಿ ರೂ. ಸಂಗ್ರಹವಾಗಿದೆ. ಸೆಸ್‌ ಸರ್ಚಾರ್ಜ್‌ 1958 ರಿಂದ ವಿಧಿಸಲಾಗುತ್ತಿದೆ ಎಂದು ಬೊಮ್ಮಾಯಿ ಅವರು ಹೇಳಿದ್ದಾರೆ. ಆದರೆ 1999 ರ ವರೆಗೆ ಸೆಸ್‌ ಸರ್ಚಾರ್ಜ್‌ ನಲ್ಲಿ ರಾಜ್ಯಕ್ಕೆ ಪಾಲು ದೊರೆಯುತ್ತಿದ್ದು. ಸಂವಿಧಾನ ತಿದ್ದುಪಡಿ ಮಾಡಿ ಇದನ್ನು ಸ್ಥಗಿತಗೊಳಿಸಲಾಯಿತು.
ಕನಿಷ್ಠ ತೆರಿಗೆಯ 50% ಆದರೂ ನಮಗೆ ಕೊಡಬೇಕು. 4.71% ರಿಂದ 3.64% ಗೆ ಕಡಿಮೆಯಾಗಿದೆ.. ಇದರ ಅರಿವಾಗಿಯೇ 15ನೇ ಹಣಕಾಸು ಆಯೋಗ ವಿಶೇಷ ಅನುದಾನಕ್ಕೆ ಶಿಫಾರಸು ಮಾಡಿದ್ದು.
ನಾವು ಸಾಲ ಮಾಡಿರುವುದು ನಿಜ. ಆದರೆ ಅದು ಜಿ.ಎಸ್.ಡಿ.ಪಿ.ಯ ಶೇ. 23.68 ರಷ್ಟಿದೆ. ಅಂದರೆ ಶೇ. 25ರ ಒಳಗೇ ಇದೆ. ವಿತ್ತೀಯ ಕೊರತೆ 2.95% ಇದೆ. ರಾಜಸ್ವ ಉಳಿತಾಯ ಇಲ್ಲ, ನಿಜ. ಆದರೆ ಕೇಂದ್ರ ಸರ್ಕಾರದ ವಿತ್ತೀಯ ಕೊರತೆ 5.1% ರಷ್ಟಿದೆ.
*ಎರಡು ವರ್ಷದಲ್ಲಿ ಉಳಿತಾಯ ಬಜೆಟ್: ಸಿಎಂ ಭರವಸೆ*
ರಾಜ್ಯ ಸರ್ಕಾರ ಒಂದೇ ಒಂದು ಬಾರಿ 2020-21 ರಲ್ಲಿ ಶೇ 3 ರ ಮಿತಿ ದಾಟಿದೆ. ಇನ್ನು ಎರಡು ವರ್ಷದಲ್ಲಿ ಆಯವ್ಯಯವನ್ನು ರಾಜಸ್ವ ಉಳಿತಾಯಕ್ಕೆ ತಂದೇ ತರುವುದಾಗಿ ಸದನಕ್ಕೆ ಭರವಸೆ ನೀಡುತ್ತೇನೆ.
2018 ರಲ್ಲಿ ನನ್ನ ಅವಧಿಯ ಮುಕ್ತಾಯದ ವೇಳೆ 2.42 ಲಕ್ಷ ಕೋಟಿ ಸಾಲ ಇದ್ದು, 2023 ಮಾರ್ಚ್‌ ವೇಳೆಗೆ 5.23 ಲಕ್ಷ ಕೋಟಿ ಇದೆ. ಇವರು ನಾಲ್ಕು ವರ್ಷದಲ್ಲಿ 2,81,00 ಕೋಟಿ ರೂ. ಮಾಡಿದ್ದಾರೆ. ಇದಲ್ಲದೇ ಜಿ.ಎಸ್.ಟಿ. ಪರಿಹಾರ ಸಾಲ 3,000 ಕೋಟಿ ರೂ. ಮಾಡಿದ್ದಾರೆ.
ಕೇಂದ್ರದಲ್ಲಿ 2013-14 ರಲ್ಲಿ 53,10,000 ಕೋಟಿ ಸಾಲ ಇತ್ತು. ಈಗ 183,67,132 ಕೋಟಿ ಸಾಲ ಇದೆ. ನರೇಂದ್ರ ಮೋದಿಯವರ ಅವಧಿಯಲ್ಲಿ 130 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ.. ದೇಶವನ್ನು ಸಾಲಗಾರರನ್ನಾಗಿ ಮಾಡಿದವರು ಯಾರು? ನರೇಂದ್ರ ಮೋದಿಜಿ, ಬಿಜೆಪಿಯವರು ಅಲ್ಲವೇ?.
ನಾವು ಬಡವರಿಗೆ, ರೈತರಿಗೆ, ಹೆಣ್ಣುಮಕ್ಕಳಿಗೆ, ಯುವಕರಿಗೆ, ಮಹಿಳೆಯರಿಗೆ, ಕಾರ್ಮಿಕರಿಗೆ ಆರ್ಥಿಕ , ಸಾಮಾಜಿಕ ಶಕ್ತಿ ತುಂಬಿಸುವ ಕೆಲಸ ಮಾಡುತ್ತಿದ್ದೇವೆ.
ರಾಜ್ಯದ ಭೌತಿಕ ಆರೋಗ್ಯ, ಆರ್ಥಿಕ ಆರೋಗ್ಯ, ಮಾನಸಿಕ ಆರೋಗ್ಯ ಹಾಗೂ ಆಧ್ಯಾತ್ಮಿಕ ಆರೋಗ್ಯ- ಈ ನಾಲ್ಕು ಆಯಾಮಗಳಲ್ಲಿ ಕಾರ್ಯನಿರ್ವಹಿಸಲಿದ್ದೇವೆ.

*ನಾಡಿನ ಜನಕ್ಕೆ ಮಾಡಿರುವ ಅನ್ಯಾಯವನ್ನು ಸಮರ್ಥಿಸುವ ಮಾಡುವ ಬಿಜೆಪಿ ನಾಯಕರಿಗೆ ಮೋದಿ ಮುಂದೆ ರಾಜ್ಯದ ಪರವಾಗಿ ಮಾತನಾಡುವ ತಾಕತ್ತಿಲ್ಲ:ಸಿಎಂ ಸಿದ್ದರಾಮಯ್ಯ*

*ದೇಶದಲ್ಲಿ ಸ್ವಂತ ತೆರಿಗೆ ಹೆಚ್ಚಿರುವ ರಾಜ್ಯಗಳ ಪೈಕಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ*

*ನಮ್ಮ ಗ್ಯಾರಂಟಿಗಳನ್ನೇ ಕದ್ದು ಅದಕ್ಕೆ ಮೋದಿ ಗ್ಯಾರಂಟಿ ಎನ್ನುತ್ತಿದ್ದಾರೆ*

ನಾಡಿನ ಜನರಿಗೆ ಮಾಡಿರುವ ಅನ್ಯಾಯವನ್ನು ಸಮರ್ಥನೆ ಮಾಡುವ ಬಿಜೆಪಿ ನಾಯಕರಿಗೆ ಮೋದಿ ಮುಂದೆ ನಾಡಿನ ಹಕ್ಕನ್ನು, ನಾಡಿನ ಜನರ ಪಾಲನ್ನು ಕೇಳುವ ತಾಕತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿ ಮಾತನಾಡಿದ ಅವರು,
ರಾಜ್ಯದ ಸ್ವಂತ ತೆರಿಗೆ ಶೇ 78% ಇದ್ದರೆ 22% ಕೇಂದ್ರ ಸರ್ಕಾರದಿಂದ ಬರುತ್ತದೆ. ಅದೇ ಗುಜರಾತಿಗೆ 75% ಸ್ವಂತ ತೆರಿಗೆ ಯಿಂದ ಬಂದರೆ 17% ಕೇಂದ್ರದಿಂದ ಹಾಗೂ ಸಹಾಯಧನ ಸೇರಿ 25% ಕೇಂದ್ರದಿಂದ ಹೋಗುತ್ತಿದೆ. ಉತ್ತರ ಪ್ರದೇಶಕ್ಕೆ 48% ಸ್ವಂತ ತೆರಿಗೆ ಇದ್ದರೆ 32% ಹಾಗೂ 20% ಸೇರಿ ಒಟ್ಟು 52% ಕೇಂದ್ರದಿಂದ ಹೋಗುತ್ತಿದೆ. ಆದರೆ ನಮಗೆ ಮಾತ್ರ ಕೇವಲ ಕೇವಲ ಕೇವಲ ಶೇ22% ಕೊಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶದಲ್ಲಿ ಸ್ವಂತ ತೆರಿಗೆ ಹೆಚ್ಚಿರುವ ರಾಜ್ಯಗಳ ಪೈಕಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಶಿಕ್ಷಣ, ಆರೋಗ್ಯ, ಸೇತುವೆ, ಸಾಮಾಜಿಕ ಭದ್ರತೆ, ಕಾನೂನು ಸುವ್ಯವಸ್ಥೆ ನಿರ್ವಹಣೆಗೆ ಕೇಂದ್ರದಿಂದ ಪಾಲು ಬರುತ್ತದೆ. ರೈಲ್ವೇಗೆ ಜಮೀನು ಕೊಟ್ಟು ಯೋಜನಾ ವೆಚ್ಚದಲ್ಲಿ ಶೇ 50 ರಷ್ಟು ರಾಜ್ಯ ಸರ್ಕಾರ ಭರಿಸುತ್ತದೆ. ರೈಲ್ವೆ ಇಂದ ಬಂದ ಆದಾಯವನ್ನು ಅವರೇ ಇಟ್ಟುಕೊಳ್ಳುತ್ತಾರೆ. ಟೋಲ್ ಸಂಗ್ರಹದಿಂದ ಬರುವ ಆದಾಯವನ್ನೂ ನಮ್ಮ ನಾಡಿನ ಜನರಿಗೆ ವಾಪಾಸ್ ಕೊಡುವುದಿಲ್ಲ ಎಂದು ರಾಜ್ಯಗಳಿಗೆ ತೆರಿಗೆಯಲ್ಲಿ ಆಗುತ್ತಿರುವ ಪಟ್ಟಿಯನ್ನೇ ನೀಡಿದರು.

ಕೇಂದ್ರ ಸರ್ಕಾರದ ಬಜೆಟ್ ಗಾತ್ರ 45 ಲಕ್ಷ ಕೋಟಿ ರೂ.ಗಳಿದ್ದರೂ ನಮಗೆ 50257 ಕೋಟಿ ರೂ.ಗಳನ್ನು ಮಾತ್ರ ಕೊಟ್ಟಿದ್ದಾರೆ. ಅದರಲ್ಲಿ 13 ಸಾವಿರ ಕೋಟಿ ಕೇಂದ್ರ ಪುರಸ್ಕೃತ ಯೋಜನೆಗಳೂ ಸೇರಿವೆ ಎಂದರು.
ಅದರಲ್ಲಿಯೂ ಕೇಂದ್ರದ ಪಾಲು ಕಡಿಮೆ ಇದ್ದು, ನಮ್ಮ ಪಾಲು ಹೆಚ್ಚಿದೆ ಎಂದರು.
2013 ಮಾರ್ಚ್ ವರೆಗೆ 2067 ಕಿಮೀ ರಸ್ತೆಗಳಾಗಿವೆ. ಬೇರೆ ರಾಜ್ಯಗಳಲ್ಲಿ ಇದಕ್ಕಿಂತ ಹೆಚ್ಚಾಗಿದ್ದು, ಇಲ್ಲಿಯೂ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದರು.

ಸರ್ವಶಿಕ್ಷಣ ಅಭಿಯಾನದಡಿ 702 ಕೋಟಿ ರೂ. ಕೇಂದ್ರ ಸರ್ಕಾರ ಕೊಟ್ಟರೆ ನಮ್ಮ.ಪಾಲು 472 ಕೋಟಿ ರೂ. ಕರ್ನಾಟಕ ಸರ್ಕಾರ ಹೆಚ್ಚುವರಿಯಾಗಿ 1528 ಕೋಟಿ ರೂ.ಗಳನ್ನು ನೀಡಿದೆ. ಮಧ್ಯಾಹ್ನದ ಬಿಸಿಯೂಟದಡಿ 594 ಕೋಟಿ ಕೇಂದ್ರ ಕೊಟ್ಟರೆ ರಾಜ್ಯ ಸರ್ಕಾರ 346 ಕೋಟಿ ರೂ. ನೀಡಿ ಹೆಚ್ಚುವರಿಯಾಗಿ 967 ಕೋಟಿ ರೂ.ಗಳನ್ನು ನೀಡಿದೆ. ಆಯುಷ್ಮಾ ನ್ ಭಾರತ್ ಯೋಜನೆಯಡಿ 187 ಕೋಟಿ ರೂ.ಗಳನ್ನು ಕೇಂದ್ರ ನೀಡಿದ್ದರೆ 124 ಕೋಟಿ ರೂ ಜೊತೆಗೆ 624 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ನೀಡಿದೆ.

*ನಮ್ಮ ಗ್ಯಾರಂಟಿ ಕದ್ದಿದ್ದಾರೆ*

ಸಾಮಾಜಿಕ ಭದ್ರತಾ ಯೋಜನೆಯಡಿ ಕೇಂದ್ರ ಸರ್ಕಾರ 525 ಕೋಟಿ ರೂ. ನೀಡಿದರೆ, ರಾಜ್ಯ ಸರ್ಕಾರ 350 ಕೋಟಿ ನೀಡಿದೆ ಅದರ ಜೊತೆಗೆ 8569 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಕೊಟ್ಟಿದೆ. ಒಟ್ಟಾರೆಯಾಗಿ 13005 ಕೋಟಿ ರೂ.ಗಳು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಬರುತ್ತದೆ ಅಷ್ಟೇ ಎಂದು ಮುಖ್ಯಮಂತ್ರಿಗಳು ವಿವರಿಸಿದರು. ಪಿಎಂ ಕೃಷಿ ಸಿಂಚಯಿ ಯೋಜನೆಯಡಿ 57% ಕೇಂದ್ರ ಸರ್ಕಾರ ಹಾಗೂ 33% ರಾಜ್ಯ ಸರ್ಕಾರ ನೀಡುತ್ತದೆ ಅದರ ಜೊತೆ ಶೇ 35 ರಷ್ಟು ಹೆಚ್ಚುವರಿ ಮೊತ್ತವನ್ನು ರಾಜ್ಯ ಸರ್ಕಾರ ನೀಡುತ್ತದೆ . ಪಿ ಎಂ ಆವಾಸ್ ಯೋಜನೆಯಡಿ 5-6 ಲಕ್ಷ ರೂ ರಾಜ್ಯ ಸರ್ಕಾರ ನೀಡಿದರೆ, ಕೇಂದ್ರ 1.50.ಲಕ್ಷ ರೂ. ನೀಡುತ್ತದೆ. ಅದರ ಜೊತೆಗೆ 1.38 ಲಕ್ಷ ಜಿಎಸ್ ಟಿ ಸೇರಿ ಒಂದು ಮನೆಗೆ ಕೇಂದ್ರ ಸರ್ಕಾರ ನೀಡುವುದು ಕೇವಲ 12 ಸಾವಿರ ರೂ ಮಾತ್ರ ಎಂದರು. ಇದರಲ್ಲಿ ನಮ್ಮ ಹೆಸರಿಲ್ಲ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದ ಸಿಎಂ ಮೋದಿ ಗ್ಯಾರಂಟಿ ಎಂದು ನಮ್ಮ ಗ್ಯಾರಂಟಿ ಕದ್ದಿದ್ದಾರೆ ಎಂದರು.